‘ಚಿನ್ನದ ಹುಡುಗ’ನ ಕನಸು ನನಸು – ಅಪ್ಪ ಅಮ್ಮನ ಜೊತೆ ವಿಮಾನ ಏರಿದ ನೀರಜ್..!
ಟೋಕಿಯೋ ಒಲಂಪಿಕ್ಸ್ 2021ರಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟು ಸಾಧನೆ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ ಕನಸು ಇದೀಗ ನನಸಾಗಿದೆ. ಹರಿಯಾಣ ಮೂಲದ ನೀರಜ್ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ಭಾರತದ ಚಿನ್ನದ ಬರ ನೀಗಿಸಿದ್ದರು. ಇದೀಗ ಅವರು ತಮ್ಮ ಬಹುಕಾಲದ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ಯಾರ ಬಳಿ ಈ ದೈವಿಕ ಗಿಡ ಮೂಲಿಕೆಯ ಬೇರು ಇರುತ್ತದೆಯೋ ಅವರ ಎಲ್ಲರ ಮನೆಯಲ್ಲಿ ಸಂಪತ್ತಿನ ನೆಮ್ಮದಿ ಜೀವನವಾಗಲಿದೆ..!!
ನೀರಜ್ ಚೋಪ್ರಾ ಮೊದಲ ಬಾರಿಗೆ ತಮ್ಮ ತಂದೆ ತಾಯಿಯವರನ್ನು ವಿಮಾನದಲ್ಲಿ ಪ್ರಯಾಣ ಮಾಡಿಸುವ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ನೀರಜ್ ನನ್ನ ಬಹುದಿನದ ಸಣ್ಣ ಕನಸೊಂದು ಇಂದು ಈಡೇರಿದೆ. ನನ್ನ ತಂದೆ–ತಾಯಿಯ ಮೊದಲ ವಿಮಾನ ಪ್ರಯಾಣದ ಆಸೆ ಈಡೇರಿಸಿದ್ದೇನೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. 23 ವರ್ಷದ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ ಟ್ವೀಟ್ ಗೆ ನೆಟ್ಟಿಗರು ಕಮೆಂಟ್ ಗಳ ಸುರಿಮಳೆ ಹರಿಸುತ್ತಿದ್ದಾರೆ. ಖಾಸಗಿ ಜೆಟ್ ಒಂದರಲ್ಲಿ ತಂದೆ ಸತೀಶ್ ಕುಮಾರ್ ತಾಯಿ ಸರೋಜಾ ದೇವಿ ಅವರನ್ನು ವಿಮಾನ ಪ್ರಯಾಣ ಮಾಡಿಸಿದ್ದಾರೆ.