ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ ಮೌಂಟ್ ಅಬು..!

Namratha Rao by Namratha Rao
September 11, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ ಮೌಂಟ್ ಅಬು..!

ರಾಜಸ್ಥಾನ ಹಲವು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ವಿಶೇಷತೆಗಳು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಜೈಪುರ್, ಉದಯಪುರ, ಜೋಧಪುರ, ಜೈಸಲ್ಮೇರ್, ಬಿಕಾನೇರ್, ಚಿತ್ತೋರ್ಘಡ್ ಹೀಗೆ ಒಂದೊಂದು ಸ್ಥಳವೂ ಅದ್ಭುತ. ಅದರಲ್ಲೂ ರಾಜಸ್ಥಾನದ ಏಕೈಕ ಗಿರಿಧಾಮವಾದ ಮೌಂಟ್ ಅಬು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.

Related posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

February 14, 2026
india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026

ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣದಿಂದ ಕೂಡಿದ ಮೌಂಟ್ ಅಬು ಸಿರೋಹಿ ಜಿಲ್ಲೆಯಲ್ಲಿದೆ. ಈ ಸ್ಥಳವು ಜೈನರ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿರುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 1220 ಮೀಟರ್ ಎತ್ತರದಲ್ಲಿದೆ.

ಸರ್ಪದೇವತೆಯಿಂದ ಈ ಗಿರಿಧಾಮಕ್ಕೆ ಹೆಸರು ಬಂದಿದೆ..!

ದಂತ ಕತೆಗಳ ಪ್ರಕಾರ ಈ ಸರ್ಪ ದೇವತೆಯು ಪರಶಿವನ ವಾಹನವಾದ ನಂದಿಗೆ ರಕ್ಷಣೆ ಒದಗಿಸುವ ಸಲುವಾಗಿ ಇಲ್ಲಿಗೆ ಆಗಮಿಸಿತಂತೆ. ಅರ್ಬುದಾರಣ್ಯ ಹೆಸರು ಕಾಲನುಕ್ರಮದಲ್ಲಿ ಅಬು ಪರ್ವತ್ ಅಥವಾ ಮೌಂಟ್ ಅಬು ಎಂದು ಬದಲಾಯಿತು. ಐತಿಹಾಸಿಕವಾಗಿ ಈ ಸ್ಥಳವು ಗುರ್ಜರರ ಅಥವಾ ಗುಜ್ಜಾರರು ಮತ್ತು ಅವರಿಗೆ ಸಂಬಂಧಿಸಿದವರಿಗೆ ಸೇರಿತ್ತು ಎನ್ನಲಾಗುತ್ತದೆ.

ಮೌಂಟ್ ಅಬು ಧ್ಯಾನಕ್ಕೆ ಪ್ರಸಿದ್ಧಿ..!

ಮೌಂಟ್ ಅಬು ಪರಿಸರದಲ್ಲಿ ಪ್ರಜಾಪಿತ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಧ್ಯಾನಮಂದಿರವಿದೆ. ಇದು ಇರುವುದು ಪಾಂಡವ ಬನದಲ್ಲಿ. ಇಲ್ಲಿ ಒಂದೇ ಬಾರಿಗೆ ಸುಮಾರು 2000 ಜನರು ಆಸೀನರಾಗಬಹುದು. ಇಲ್ಲಿ, ಯೂನಿವರ್ಸಲ್ ಹಾರ್ಮೋನಿ ಹಾಲ್, ಶಾಂತಿ ಬನದ ಡೈಮಂಡ್ ಹಾಲ್ ಇದೆ. ಇಲ್ಲಿ ಒಂದೇಬಾರಿಗೆ ಸುಮಾರು 20 ಸಾವಿರ ಮಂದಿಗೆ ಭೋಜನ ತಯಾರಾಗುವಂತಹ ಪಾಕಶಾಲೆಯೂ ಇದೆ. ಈ ತಾಣ ಆಸ್ತಿಕರನ್ನಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತದೆ.

ಇದು ಮರುಭೂಮಿಯ ಒಯಾಸಿಸ್..!
ಪರ್ವತದ ತುದಿಯಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ ಎಂಬ ನಂಬಿಕೆಯೂ ಇದೆ. ಮೌಂಟ್ ಅಬುವಿನ ಹೊರಗೆ ಜಗತ್ ಎಂಬಲ್ಲಿರುವ ಬಂಡೆಯ ಸೀಳಿನಲ್ಲಿ ದುರ್ಗಾ ದೇವಾಲಯ, ಅಂಬಿಕಾ ಮಾತಾ ದೇವಾಲಯಗಳಿವೆ. ಮಾತ್ರವಲ್ಲ, ಈ ಪ್ರದೇಶದಲ್ಲಿ ಸೂಯಾಸ್ತವನ್ನು ಕಣ್ತುಂಬಿಕೊಳ್ಳಬಹುದು.

ಇಲ್ಲಿನ‌ ಮತ್ತೊಂದು ಆಕರ್ಷಣೆ ಎಂದರೆ, ನಕ್ಕಿ ಸರೋವರ. ಈ ಸರೋವರದ ಹತ್ತಿರದ ಬೆಟ್ಟವೊಂದರ ಮೇಲೆ ಕಪ್ಪೆಗಲ್ಲನ್ನು ಕಾಣಬಹುದು. ಈ ಕಲ್ಲು ಬೃಹದಾಕಾರದ ಕಪ್ಪೆಯಂತೆ ಕಾಣುವುದರಿಂದ ಇದಕ್ಕೆ ಕಪ್ಪೆಗಲ್ಲು ಎನ್ನಲಾಗಿದೆ. ಇದೊಂದು ಕುತೂಹಲ ಮೂಡಿಸುವ ಸ್ಥಳವಾಗಿದ್ದು, ರಘುನಾಥ ದೇವಾಲಯ, ಮಹಾರಾಜ ಜೈಪುರ್ ಅರಮನೆಗಳೂ ಸಹ ಬೆಟ್ಟದ ಮೇಲೆ ನಕ್ಕಿ ಸರೋವರದ ಬಳಿ ಇವೆ.

ಮೌಂಟ್‌ ಅಬು ಶಿಖರ ಗುಜರಾತ್ ‌ನ ಪಾಲಂಪುರ ನಿಂದ 58 ಕಿಲೋ ಮೀಟರ್‌ ದೂರದಲ್ಲಿದೆ. ಉತ್ತರ ಅಹಮದಾಬಾದಿಗೆ 110 ಮೈಲಿ ದೂರದಲ್ಲಿದೆ. ಏಳು ಮೈಲಿ ಅಗಲವಾಗಿರುವ ಒಂದು ನದೀಕಣಿವೆ ಉಳಿದ ಬೆಟ್ಟಗಳ ಸಾಲಿನಿಂದ ಪರ್ವತವನ್ನು ಪ್ರತ್ಯೇಕಿಸಿದೆ. ಈ ಕಣಿವೆಯಲ್ಲಿ ಪಶ್ಚಿಮ ಬಾನಸ್ ಎಂಬ ನದಿ ಹರಿಯುವುದು. ಈ ಪರ್ವತ ಮೈದಾನದ ನಡುವೆ ಇರುವ ಕಡಿದಾದ ಗ್ರಾನೈಟ್ ಶಿಲಾದ್ವೀಪದಂತೆ ತೋರುವುದು. ಎತ್ತರ 4000ಅಡಿ ಗಳಿಂದ 5650 ಅಡಿಗಳ ವರೆಗೆ. ಈ ಪರ್ವತ, 22 ಕಿಲೋ ಮೀಟರ್‌ ಉದ್ದ ಮತ್ತು 9 ಕಿಲೋ ಮೀಟರ್‌ ವಿಸ್ತಾರವಿರುವ ಅಪರೂಪದ ಕಲ್ಲುಬಂಡೆಗಳಿಂದ ಕೂಡಿದ ಪ್ರಸ್ಥಭೂಮಿಯನ್ನು ರೂಪಿಸಿದೆ.

ಮೌಂಟ್ ಅಬು ವನ್ಯಜೀವಿ ಧಾಮವು ವಿಶೇಷವಾಗಿ ಸಸ್ಯ ಸಂಪತ್ತಿನ ಆಗರವಾಗಿದೆ. ಇದು 820 ಬಗೆಯ ಸಸ್ಯಗಳಿಗೆ ಆಶ್ರಯವನ್ನೊದಗಿಸಿದೆ. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಆರ್ಕಿಡ್ ಹೂವುಗಳನ್ನು ಸಹ ನಾವು ಕಾಣಬಹುದು. ಇದರೊಂದಿಗೆ ಈ ವನ್ಯಜೀವಿ ಧಾಮದ ಸುತ್ತ –ಮುತ್ತ ಹಸಿರಿನಿಂದ ಕೂಡಿದ್ದು, ತನ್ನಲ್ಲಿರುವ ಪ್ರಾಣಿ ಸಂಪತ್ತಿಗಾಗಿ ಪ್ರಸಿದ್ಧಿ ಪಡೆದಿದೆ. ವನ್ಯಜೀವಿ ಪ್ರಿಯರು ಇಲ್ಲಿಗೆ ಇಲ್ಲಿನ ವಿಶಿಷ್ಟವಾದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ನೋಡಲು ಆಗಮಿಸುತ್ತಿರುತ್ತಾರೆ. ಹಿಂದೆ ಈ ಬೆಟ್ಟಗಳಲ್ಲಿ ಹುಲಿ ಮತ್ತು ಸಿಂಹಗಳು ಕಂಡುಬರುತ್ತಿದ್ದವು. ಆದರೆ ಈಗ ಕೇವಲ ಬೆಕ್ಕಿನ ಜಾತಿಯ ಮಾಂಸಾಹಾರಿ ಪ್ರಾಣಿಗಳು ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದುದು ಚಿರತೆ. ಅಷ್ಟೇ ಅಲ್ಲದೆ ಈ ಧಾಮವು ಸಾಂಬರ್ ಜಿಂಕೆ, ಕಾಡು ಹಂದಿ, ಕರಡಿ, ನರಿ, ಭಾರತದ ಗುಳ್ಳೆ ನರಿ, ತೋಳ, ಕತ್ತೆ ಕಿರುಬ, ಭಾರತೀಯ ಪುನುಗು ಬೆಕ್ಕು ಮತ್ತು ಕಾಡು ಬೆಕ್ಕುಗಳಂತಹ ವಿಪುಲವಾದ ವನ್ಯಜೀವಿ ಗಳಿವೆ.

ಇಲ್ಲಿಗೆ ರಸ್ತೆ ಮಾರ್ಗವಾಗಿ ತಲುಪಲು ಗುಜರಾತ್ ಮತ್ತು ರಾಜಸ್ಥಾನದ ಕೆಲವು ಭಾಗಗಳಿಂದ ಬಸ್ಸುಗಳಿವೆ. ಅಥವಾ ಟೂರಿಸ್ಟ್ ಗಳಿಗಾಗಿ ಟ್ಯಾಕ್ಸಿ ಸೇವೆ ಲಭ್ಯವಿರುವಿದರಿಂದ ಅದರ ಮೂಲಕವೂ ಆಗಮಿಸಬಹುದು. ಇಲ್ಲಿಗೆ ವಿಮಾನ ಮಾರ್ಗದಲ್ಲಿ ತಲುಪಬೇಕೆಂದರೆ ,ಇಲ್ಲಿಂದ 185 ಕಿ,ಮೀ ದೂರದಲ್ಲಿರುವ ಉದಯ್ ಪುರಕ್ಕೆ ಬಂದು ಅಲ್ಲಿಂದ ಮೌಂಟ್ ಅಬುಗೆ ಬರಬಹುದು.

Tags: #saakshatvindiainteresting factsmount abuRajasthantourismTravel
ShareTweetSendShare
Join us on:

Related Posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
February 14, 2026
0

ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram