ಕಾಫಿನಾಡಿನಲ್ಲಿ ನಿಫಾ ಆತಂಕ – ನೂರಾರು ಬಾವಲಿಗಳ ಕಂಡು ಭಯಭೀತರಾಗಿರುವ ಜನ..!
ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಹಾವಳಿಯ ನಡುವೆ ನಿಫಾ ಆತಂಕವೂ ಹೆಚ್ಚಾಗುತ್ತಿದೆ.. ಹೀಗಾಗಿ ಕರ್ನಾಕದಲ್ಲಿ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ. ಆದ್ರೆ ಕೇರಳದಲ್ಲಿ ನಿಫಾ ಕಾಟ ಹೆಚ್ಚಾಗಿರೋದು ರಾಜ್ಯಕ್ಕೆ ಮೊದಲೇ ಆತಂಕ ಹೆಚ್ಚಾಗಿದೆ. ಈ ನಡುವೆ ಇದೀಗ ಚಿಕ್ಕಮಗಳೂರಿನಲ್ಲೂ ನಿಫಾ ಆತಂಕ ಶುರುವಾಗಿದೆ.
ಹೌದು.. ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿಗಳ ನಿವಾಸ ಹಾಗೂ ನಗರಸಭೆಯ ಆವರಣದಲ್ಲಿನ ಮರಗಳಲ್ಲಿ ನೂರಾರು ಬಾವಲಿಗಳು ಮರಗಳಲ್ಲಿ ತಲೆಕೆಳಗಾಗಿ ಜೋತು ಬಿದ್ದಿರೋದು ಕಂಡುಬಂದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.. ಅಲ್ಲದೇ ನಿಫಾ ವೈರಸ್ ಗೆ ಮೂಲ ಕಾರಣವೇ ಬಾವಲಿ ಎನ್ನಲಾಗಿರೋದು ಜನರು ಭಯಭೀತರಾಗುವಂತೆ ಮಾಡಿದೆ. ಸಾರ್ವಜನಿಕರು ಬಾವಲಿಗಳ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ. ಅಂದ್ಹಾಗೆ ಈ ಬಾವಲಿಗಳು ತುಂಬಾ ವರ್ಷಗಳಿಂದಲೂ ಆ ಸ್ಥಳದಲ್ಲಿದೆ. ಆದ್ರೆ ಕೇರಳದಲ್ಲಿ ಇತ್ತೀಚೆಗೆ ನಿಫಾ ಆತಂಕ ಹೆಚ್ಚಾದ ಬೆನ್ನಲ್ಲೇ , ಕಾಫಿನಾಡಿನಲ್ಲಿ ಜನ ಬಾವಲಿಗಳಿಗೆ ಭಯಭೀತರಾಗಿದ್ದಾರೆ.