ವೈಟ್ ಬಾಲ್ ಕ್ರಿಕೆಟ್ ಗೆ `ಹಿಟ್ ಮ್ಯಾನ್ ಕ್ಯಾಪ್ಟನ್’..? rohit sharma
ಬೆಂಗಳೂರು : ಅತೀ ಶೀಘ್ರದಲ್ಲಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶಮಾ ಟೀಂ ಇಂಡಿಯಾದ ಟಿ-20 ಹಾಗೂ ಏಕದಿನ ಕ್ರಿಕೆಟ್ ನ ಪೂರ್ಣ ಪ್ರಮಾಣದ ಸಾರಥಿಯಾಗಲಿದ್ದಾರೆ.
ಸದ್ಯ ಮೂರು ಮಾದರಿಯಲ್ಲೂ ತಂಡವನ್ನು ಯಶಸ್ವಿಯಾಗಿ ನಡೆಸುತ್ತಿರುವ ವಿರಾಟ್ ಕೊಹ್ಲಿ, ಟಿ 20 ವಿಶ್ವಕಪ್ ಬಳಿಕ ಟಿ-20 ಮತ್ತು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದಾರಂತೆ.
ಈಗಾಗಲೇ ಈ ಬಗ್ಗೆ ವಿರಾಟ್ ಬಿಸಿಸಿಐ ಬಿಗ್ ಬಾಸ್ ಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ಹರಿಸಲು ವಿರಾಟ್ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದು, ಐಪಿಎಲ್ ನ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಪಟ್ಟ ದಕ್ಕಲಿದೆ.
ಇನ್ನು ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ರೋಹಿತ್ 2013, 2015, 2017, 2019 ಮತ್ತು 2020 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟೇರಿಕ್ಕೇರಿಸಿದ್ದಾರೆ.
ಇದಲ್ಲದೆ 2018 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‍ನಲ್ಲಿ ಗೆಲುವು ಒಳಗೊಂಡಂತೆ ರೋಹಿತ್ ನಾಯಕತ್ವದಲ್ಲಿ ಭಾರತ 10 ಏಕದಿನ ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದೆ.
ರೋಹಿತ್ ನಾಯಕತ್ವದಲ್ಲಿ ಭಾರತ ಟಿ-20 19 ಪಂದ್ಯಗಳನ್ನಾಡಿದ್ದು, 15 ಪಂದ್ಯಗಳಲ್ಲಿ ಗೆದ್ದಿದೆ.









