ಕೊಹ್ಲಿ ಫಾರ್ಮ್ ಗೆ ಬಂದ್ರೆ ಬರೀ ಶತಕವಲ್ಲ.. ತ್ರಿಶತಕ ಬಾರಿಸ್ತಾನೆ : ಕಪಿಲ್
ಮುಂಬೈ : ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಸತತ ವೈಫಲ್ಯಗಳನ್ನು ಕಾಣುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಅವರು ಒಂದೇ ಒಂದು ಶತಕ ಸಿಡಿಸಿಲ್ಲ. ಇದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಅವರು ನಾಯಕತ್ವದ ಒತ್ತಡ ಎದುರಿಸುತ್ತಿದ್ದಾರೆ ಎಂದು ಕೆಲ ಕ್ರಿಕೆಟ್ ದಿಗ್ಗಜರು ಹೇಳುತ್ತಿದ್ದಾರೆ.
ಈ ಮಧ್ಯೆ ವಿರಾಟ್ ಕೊಹ್ಲಿ ಪರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಬ್ಯಾಟಿಂಗ್ ಮಾಡಿದ್ದಾರೆ.
ಕೊಹ್ಲಿ ರನ್ ಗಳಿಸುತ್ತಿದ್ದ ವರ್ಷಗಳೆಲ್ಲಾ ನಾಯಕತ್ವದಿಂದ ಆತನ ಬ್ಯಾಟಿಂಗ್ ಮೇಲೆ ಪರಿಣಾಮವಾಗುತ್ತಿದೆ ಎಂದು ಯಾರೊಬ್ಬರೂ ಹೇಳುತ್ತಿರಲಿಲ್ಲ.
ಆತನ ಗ್ರಾಫ್ನಲ್ಲಿ ಸ್ವಲ್ಪ ಮೇಲೆ ಕೆಳಗೆ ಆಗುತ್ತಲೇ ಎಲ್ಲೆಡೆ ಅಭಿಪ್ರಾಯಗಳು ಕೇಳಿಬರಲು ಆರಂಭಿಸಿವೆ ಎಂದು ಟೀಕಾಗಾರರಿಗೆ ತಿರುಗೇಟು ನೀಡಿದ್ದಾರೆ.
ಇದಲ್ಲದೇ ಸದ್ಯ ವಿರಾಟ್ ಕೊಹ್ಲಿ ಗ್ರಾಫ್ ನಿಜಕ್ಕೂ ಹೆಚ್ಚು-ಕಮ್ಮಿ ಆಗಿದೆ. 28-32ರ ವಯಸ್ಸು ನೀವು ನಿಜಕ್ಕೂ ಅರಳುವ ಕಾಲಘಟ್ಟ. ಈಗ ಆತ ಅನುಭವಿಯಾಗಿದ್ದು ಪ್ರಬುದ್ಧರಾಗಿದ್ದಾರೆ.
ಆತ ತನ್ನ ಹಳೆಯ ಲಯಕ್ಕೆ ಮರಳಿದರೆ ವಿರಾಟ್ ಬರೀ ಶತಕ ಅಥವಾ ದ್ವಿಶತಕ ಅಲ್ಲ; ಆತ ನಿಮಗೆ 300 ರನ್ ಗಳಿಸಿ ಕೊಡಬಲ್ಲರು ಎಂದು ಹೇಳಿದ್ದಾರೆ.









