ರೋಹಿತ್ ಅಲ್ಲ… ಟಿ-20ಗೆ ಹೊಸ ನಾಯಕನನ್ನು ಸೂಚಿಸಿದ ಗವಾಸ್ಕರ್
ಮುಂಬೈ : ಸಾಕಷ್ಟು ಊಹಾಪೋಹಗಳ ಬಳಿಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಬಳಿಕ ಟಿ-20 ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಹೊಸ ನಾಯಕನ ಬಗ್ಗೆ ಚರ್ಚೆ ನಡೆಯುತ್ತಿದೆ. ವಿರಾಟ್ ಬಳಿಕ ಟಿ-20 ತಂಡದ ಸಾರಥಿ ಯಾರಾಗ್ತಾರೆ ಅನ್ನೋ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ರೋಹಿತ್ ಶರ್ಮಾ ಅವರಿಗೆ ಟಿ-20 ನಾಯಕತ್ವ ವಹಿಸುವ ಸಾಧ್ಯತೆಗಳಿವೆ.
ಯಾಕೆಂದರೇ ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಜೊತೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಈ ಕಾರಣಕ್ಕಾಗಿ ರೋಹಿತ್ ಗೆ ನಾಯಕತ್ವ ವಹಿಸುವ ಸಾಧ್ಯತೆಗಳೇ ಹೆಚ್ಚಿವೆ.
ಆದ್ರೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಭಾರತದ ಟಿ-20 ತಂಡಕ್ಕೆ ರೋಹಿತ್ ಶಮಾ ಹೊರತಾಗಿ ಹೊಸ ನಾಯಕನನ್ನು ಸೂಚಿಸಿದ್ದಾರೆ.
ಸ್ಪೋಟ್ರ್ಸ್ ತಕ್ ಜೊತೆಗೆ ಮಾತನಾಡಿರುವ ಗವಾಸ್ಕರ್, ಭವಿಷ್ಯದ ಬಗ್ಗೆ ಯೋಚನೆ ಮಾಡುವುದಾದರೆ ಕೆ.ಎಲ್.ರಾಹುಲ್ ಟಿ20 ತಂಡದ ನಾಯಕತ್ವಕ್ಕೆ ಸೂಕ್ತ ವ್ಯಕ್ತಿ ಎಂದಿದ್ದಾರೆ.
“ನೀವು ಹೊಸ ನಾಯಕನ ಬಗ್ಗೆ ಯೋಚಿಸುತ್ತಿದ್ದರೆ, ಕೆಎಲ್ ರಾಹುಲ್ ಅವರನ್ನು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಅವರ ಕಾರ್ಯಕ್ಷಮತೆ ತುಂಬಾ ಚೆನ್ನಾಗಿದೆ.
ಅವರು ಐಪಿಎಲ್ ಮತ್ತು 50 ಓವರ್‍ಗಳ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಹೀಗಾಗಿ ಟೀಂ ಇಂಡಿಯಾದ ಭವಿಷ್ಯದ ದೃಷ್ಠಿಯಿಂದ ಕೆ.ಎಲ್.ರಾಹುಲ್ ಗೆ ಟಿ-20 ತಂಡದ ನಾಯಕತ್ವ ವಹಿಸೋದು ಸೂಕ್ತ ಎಂದಿದ್ದಾರೆ.









