ರಾಜ್ಯದಲ್ಲಿ ಇಂದು 889 ಜನರಿಗೆ ಕೊರೊನಾ ಪಾಸಿಟಿವ್ Corona saaksha tv
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಳಿತ ಮುಂದುವರೆದಿದ್ದು, ಕರ್ನಾಟಕದಲ್ಲಿ ಇಂದು 889 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,67,083ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 1080 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಈವರೆಗೂ 29,13,713 ಸೋಂಕಿತರು ಗುಣಮುಖರಾದಂತೆ ಆಗಿದೆ.
ರಾಜ್ಯದಲ್ಲಿನ್ನೂ 15,755 ಸಕ್ರಿಯ ಪ್ರಕರಣಗಳಿವೆ. ಇಂದು 14 ಸೋಂಕಿತರು ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಸಾವಿನ ಸಂಖ್ಯೆ 37,587ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಇನ್ನು ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 263 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ 133, ಹಾಸನ 40, ಕೊಡಗು 45, ಮೈಸೂರು 74, ಶಿವಮೊಗ್ಗ 37, ತುಮಕೂರು 27, ಉಡುಪಿ 86 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 44 ಪ್ರಕರಣ ಸೇರಿದಂತೆ 889 ಜನರಿಗೆ ಹೊಸದಾಗಿ ಕೋವಿಡ್ ದೃಢಪಟ್ಟಿದೆ.









