ಟಿ-20 | ಹೊಸ ದಾಖಲೆಯತ್ತ ಹಿಟ್ ಮ್ಯಾನ್
ದುಬೈ : ಇಂದಿನಿಂದ 14ನೇ ಆವೃತ್ತಿಯ ಐಪಿಎಲ್ ಗೆ ಕಿಕ್ ಸ್ಟಾರ್ಟ್ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗುದ್ದಾಡಲಿವೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಶರ್ಮಾ ಮೂರು ಸಿಕ್ಸರ್ ಗಳನ್ನ ಸಿಡಿಸಿದರೇ ಟಿ-20ಯಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ ಟಿ-20ಯಲ್ಲಿ ಈವರೆಗೂ 397 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಮೂರು ಸಿಕ್ಸರ್ ಬಾರಿಸಿದರೆ 400 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ 224 ಸಿಕ್ಸರ್ ಹೊಡೆದಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಪರ 173 ಸಿಕ್ಸರ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ 51 ಸಿಕ್ಸರ್ ಬಾರಿಸಿದ್ದಾರೆ.
ಇನ್ನು ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ 324 ಸಿಕ್ಸ್ ಹೊಡೆದಿರುವ ರೈನಾ ಎರಡನೇ ಸ್ಥಾನದಲ್ಲಿದ್ದರೇ ಮೂರನೇ ಸ್ಥಾನದಲ್ಲಿ ವಿರಾಟ್ ನಾಲ್ಕರಲ್ಲಿ ಎಂಎಸ್ ಧೋನಿ ಇದ್ದಾರೆ.








