ಪಡಿಕ್ಕಲ್ @ 1 ಇಯರ್ ಇನ್ ಆರ್ ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶೈನಿಂಗ್ ಸ್ಟಾರ್ ಕನ್ನಡಿಗ ದೇವದತ್ತ್ ಪಡಿಕಲ್ ಆರ್ ಸಿಬಿ ಪಡೆಗೆ ಸೇರಿ ಇಂದಿಗೆ ಒಂದು ವರ್ಷ ಪೂರ್ಣವಾಗಿದೆ.
ಈ ಹಿನ್ನೆಲೆಯಲ್ಲಿ ಆರ್ ಸಿಬಿ ಅಭಿಮಾನಿಗಳು ದೇವದತ್ ಪಡಿಕಲ್ ಗೆ ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ.
2018 ಡಿಸೆಂಬರ್‍ನಲ್ಲಿ ನಡೆದ 2019 ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಡಿಕ್ಕಲ್ ಅವರನ್ನು ಖರೀದಿಸಿತ್ತು.
ಸದ್ಯ ಪಡಿಕಲ್ ಆರ್ ಸಿಬಿಯ ಮೇನ್ ಪಿಲ್ಲರ್ ಆಗಿದ್ದಾರೆ. ಆರಂಭಿಕರಾಗಿ ಕ್ರೀಸ್ ಗೆ ಬರುವ ಪಡಿಕಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಆ ನಿರೀಕ್ಷೆಗಳಿಗೆ ತಕ್ಕಂತೆ ಪಡಿಕಲ್ ಬ್ಯಾಟ್ ಬೀಸಿದ್ದೂ ಉಂಟು.
ಇನ್ನು ದೇವದತ್ತ್ ಪಡಿಕಲ್, ಐಪಿಎಲ್ ನಲ್ಲಿ ಆರ್ ಸಿಬಿ ಪರ 22 ಪಂದ್ಯಗಳನ್ನಾಡಿದ್ದು, 690 ರನ್ ಗಳಿಸಿದ್ದಾರೆ.
ಇದರಲ್ಲಿ ಒಂದು ಶತಕವಿದೆ. ಐದು ಅರ್ಧಶತಕಗಳಿವೆ. 76 ಬೌಂಡರಿ.. 17 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.









