ಕೋವಿಡ್ ಸದಾ ನಮ್ಮ ಜೊತೆಗೆ ಉಳಿಯಲಿದೆ – ತಜ್ಞರ ಅಭಿಪ್ರಾಯ
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.. ವಿಶ್ವಾದ್ಯಂತ ಕೊರೊನಾ ವೈರಸ್ , ರೂಪಾಂತರ ತಳಿಗಳ ಹಾವಳಿಯ ನಡುವೆ ಕೊರೊನಾ ಲಸಿಕೆ ಅಭಿಯಾನವೂ ಹೆಚ್ಚಾಗಿದೆ.. ಈ ನಡುವೆ ಡೆಲ್ಟಾ ಪ್ರಕೋಪವೂ ಹೆಚ್ಚಾಗಿದ್ದು, 3ನೇ ಅಲೆಯ ಎಚ್ಚರಿಕೆಯೂ ಸಿಕ್ಕಿದೆ. ಇದೀಗ ತಜ್ಞರು ಮಹಾಮಾರರಿಯ ಕುರಿತಾಗಿ ಭವಿಷ್ಯ ನುಡಿದಿದ್ದು ಆತಂಕಕ್ಕೂ ಕಾರಣವಾಗಿದೆ.
ಹೌದು.. ಕೋವಿಡ್ ಸದಾ ನಮ್ಮೊಂದಿಗೆ ಇರಲಿದೆ. ಸಂಪೂರ್ಣವಾಗಿ ಇದು ನಮ್ಮ ನಡುವೆಯೇ ಉಳಿದು ಹೋಗಲಿದೆ ಎಂದು ಅಭಿಪ್ರಾಯ ಹೊರಹಾಕಿರುವ ತಜ್ಞರು ಮುಂದಿನ ವರ್ಷದಷ್ಟ್ರಲ್ಲಿ ಇದು ಸಾಮಾನ್ಯ ಶೀತವಾಗಿ ಬದಲಾಗಲಿದೆ. ಇನ್ಮುಂದೆ ನಮ್ಮ ನಡುವೆ ಸಾಮಾನ್ಯ ಶೀತವಾಗಿಯೇ ಉಳಿಯಲಿದೆ ಎಂದಿದ್ದಾರೆ.
ಕೋವಿಡ್ ರಿಪೋರ್ಟ್ : ದೇಶದಲ್ಲಿ ಒಂದೇ ದಿನ 31,382 ಕೊರೊನಾ ಪ್ರಕರಣಗಳು ದೃಢ
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಪ್ರಾಧ್ಯಾಪಕ ಪ್ರೊಫೆಸರ್ ಸರ್ ಜಾನ್ ಬೆಲ್ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ವಿಶ್ವದ್ಯಾಂತ ವ್ಯಾಕ್ಸಿನ್ ಹಂಚಿಕೆಯಾಗುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದರಿಂದ ಅದು ದೇಹಕ್ಕೆ ಹೆಚ್ಚು ಹಾನಿ ಮಾಡದ ಶೀತವಾಗಿ ಬದಲಾಗಲಿದೆ ಎಂದು ಹೇಳಿದ್ದಾರೆ.
ಸಲೂನ್ ನಲ್ಲಿ ಮಾಡೆಲ್ ಹೇರ್ ಕಟ್ ವೇಳೆ ಎಡವಟ್ಟು – 2 ಕೋಟಿ ದಂಡ
ಎರಡು ಡೋಸ್ ಲಸಿಕೆ ಪಡೆದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಬಲಿಷ್ಠ ಹಿಡಿತ ಹೊಂದಿದೆ. ಈಗ ವ್ಯಾಕ್ಸಿನ್ ಮಾರುಕಟ್ಟೆ ವಿಸ್ತಾರವಾಗಿದ್ದು, ಎಲ್ಲ ಕಡೆಗೆ ಲಭ್ಯವಾಗಿದೆ. ಹೀಗಾಗಿ ಕೊರೊನಾ ಇನ್ಮುಂದೆ ಹೆಚ್ಚು ಬಾಧಿಸುವುದಿಲ್ಲ ಎಂದಿದ್ದಾರೆ. ಒಂದ್ಕಡೆ ಕೋವಿಡ್ ಶಕ್ತಿಹೀನವಾಗ್ತಿರೋದು ಸಮಾಧಾನಕರ ವಿಚಾರವೇ ಆದ್ರೂ ಕೂಡ ಶಾಶ್ವತವಾಗಿ ನಮ್ಮ ಜೊತೆಗೆ ಉಳಿಯಲಿ ಅನ್ನೋದು ಆತಂಕಕ್ಕೂ ಕಾರಣವಾಗಿದೆ.








