ಪಾಕಿಸ್ತಾನ ಅಗ್ನಿಶಾಮಕ ವೇಷ ತೊಟ್ಟು ಉಗ್ರರನ್ನ ಪೋಷಿಸುತ್ತಿದೆ – ಭಾರತ
ಪಾಕಿಸ್ತಾನವು ಅಗ್ನಿಶಾಮಕ ವೇಷ ಧರಿಸಿ ( ಬೆಂಕಿ ಆರಿಸುವ ನಾಟಕ) ಹಿಂದೆ ಉಗ್ರರನ್ನ ಪೋಷಿಸುತ್ತಿರುವ ದೇಶ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಕುತಂತ್ರಿ ಪಾಕಿಸ್ತಾನದ ಅಸಲಿಯತ್ತು ಬಯಲು ಮಾಡಿದೆ. ಅಲ್ಲದೇ ಪಾಕಿಸ್ತಾನದ ನೀತಿಯಿಂದಾಗಿ ಇಡೀ ಜಗತ್ತೇ ತೊಂದರೆ ಅನುಭವಿಸಿದೆ ಅನುಭವಿಸುತ್ತಿದೆ , ಮುಂದೆಯೂ ಅನುಭವಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ತಿವಿದಿದೆ.
ಓಟಿಟಿ | ಐದು ಸಿನಿಮಾ.. ವೆಬ್ ಸಿರೀಸ್ ರಿಲೀಸ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಪಾಕಿಸ್ತಾನ ಮಾನ್ಯ ಪ್ರಧಾನಿ ಇಮ್ರಾನ್ ಖಾನ್ ಸುಮ್ಮನಿರಲಾರದೇ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತವನ್ನ ಕೆಣಕಿ ಮುಖಭಂಗ ಅನುಭವಿಸಿದ್ದಾರೆ. ಪಾಕ್ ವಿಚಾರವಾಗಿ ಇಮ್ರಾನ್ ಪ್ರಸ್ತಾಪಿಸಿದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ರಾಯಭಾರ ಕಚೇರಿಯ ಕಾರ್ಯದರ್ಶಿ ಸ್ನೇಹಾ ದುಬೆ ಅವರು ನಮ್ಮ ದೇಶದ ಆಂತರಿಕ ವಿಷಯವನ್ನು ಎಳೆದು ತಂದು ವಿಶ್ವ ವೇದಿಕೆಯಲ್ಲಿ ಸುಳ್ಳನ್ನು ಹೇಳುವ ಮೂಲಕ ಈ ವೇದಿಕೆಯ ಘನತೆ ಹಾಳು ಮಾಡಲು ಯತ್ನಿಸಿದ ಪಾಕಿಸ್ತಾನದ ನಾಯಕನ ವಿರುದ್ಧ ನಮ್ಮ ಪ್ರತಿಕ್ರಿಯೆ ಹಕ್ಕನ್ನು ಬಳಸುತ್ತೇನೆ ಎಂದು ಇಮ್ರಾನ್ ಖಾನ್ ಗೆ ತಕ್ಕ ುತ್ತರ ಕೊಟ್ಟಿದ್ದಾರೆ.
B.E ಪದವಿಯಲ್ಲಿ ಜೀವಶಾಸ್ತ್ರ ಸೇರ್ಪಡೆ!
ಅಲ್ಲದೇ ಇಂತಹ ಹೇಳಿಕೆಗಳು ಸಾಮೂಹಿಕ ವಿರೋಧಕ್ಕೆ ಅರ್ಹವಾಗಿವೆ. ಇಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ನಿರಂತರ ಸುಳ್ಳು ಹೇಳುವ ಮನಸ್ಥಿತಿ ಬಗ್ಗೆ ನಾವು ಕನಿಕರಪಡಬೇಕಿದೆ ಎಂದಿದ್ದಾರೆ.
ಇದೇ ವೇಳೆ ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶು ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ ವಾಸ್ತವವಾಗಿ ಅದು ಅಗ್ನಿಶಾಮಕ ವೇಷಧಾರಿ ದೇಶ ಮತ್ತು ಅವರ ನೀತಿಗಳಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಅಷ್ಟೇ ಅಲ್ಲ ಅವರು ತಮ್ಮ ದೇಶದಲ್ಲಿ ನಡೆಯುತ್ತಿರುವ ಮತೀಯ ಹಿಂಸೆಯನ್ನು ಮುಚ್ಚಿಡಲು ಭಯೋತ್ಪಾದಕ ಕೃತ್ಯಗಳೆಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತವೆ ಎಂದು ಸ್ನೇಹ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳೂ ಸೇರಿವೆ. ಪಾಕಿಸ್ತಾನವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.








