ಮೈದಾ ಹಿಟ್ಟು ದೇಹಕ್ಕೆ ಅಪಾಯಕಾರಿಯೇ?
ಹಿಟ್ಟಿನ ಸಂಸ್ಕರಿಸಿದ ರೂಪ ಮೈದಾ. ಹಿಟ್ಟನ್ನು ಪರಿಷ್ಕರಿಸಿದ ನಂತರ ಅದು ಎಲ್ಲಾ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಮೈದಾ ಹಿಟ್ಟಿನಲ್ಲಿರುವ ಅಪಾಯಕಾರಿ ಅಂಶಗಳು
ಮಾನವ ದೇಹದ ಪಿಹೆಚ್ ಮಟ್ಟವು 7.4 ಆಗಿದೆ. ಆಹಾರದಲ್ಲಿ ಅತಿಯಾದ ಆಮ್ಲೀಯ ಆಹಾರಗಳ ಕಾರಣ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ, ಮೈದಾ ಸೇವನೆಯು ಮೂಳೆಗಳು ದುರ್ಬಲಗೊಳ್ಳಲು ಕಾರಣವನ್ನು ಹೆಚ್ಚಿಸುತ್ತದೆ.

ಮೈದಾ ಹಿಟ್ಟಿನಿಂದ ತಯಾರಿಸಿದ ತಿನಿಸುಗಳ ಸೇವನೆ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ನಾವು ಸುಲಭವಾಗಿ ರೋಗಗಳಿಗೆ ಬಲಿಯಾಗಬಹುದು. ಹಾಗಾಗಿ ಒಬ್ಬ ವ್ಯಕ್ತಿಯು ಮೈದಾ ಹಿಟ್ಟಿನಿಂದ ತಯಾರಿಸಿದ ತಿನಿಸು ಕಡಿಮೆ ಸೇವಿಸಬೇಕು.
ಮೈದಾ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿರ್ಮಿಸುತ್ತದೆ.ಇದರಲ್ಲಿ ಗ್ಲೂಕೋಸ್ ಸುತ್ತಮುತ್ತಲಿನ ಪ್ರೋಟೀನ್‌ಗಳಿಗೆ ಅಂಟಿಕೊಳ್ಳುತ್ತದೆ.
ಮೈದಾ ಹಿಟ್ಟಿನ ಸೇವನೆಯು ಕರುಳಿಗೆ ತುಂಬಾ ಹಾನಿಕಾರಕವಾಗಿದೆ. ಇದರಲ್ಲಿ ಲೆಕ್ಟಿನ್ ಕಂಡುಬರುತ್ತದೆ. ಇದು ಕರುಳಿನ ಒಳಪದರದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1442308636605403141?s=19
https://twitter.com/SaakshaTv/status/1442323719926403079?s=19
https://twitter.com/SaakshaTv/status/1442285994670239747?s=19
https://twitter.com/SaakshaTv/status/1441946369036636163?s=19
#Saakshatv #healthtips #maida








