ತಗ್ಗಿದ ಹೆಮ್ಮಾರಿ ಅಬ್ಬರ | ಕೊರೊನಾ ಮೂರನೇ ಅಲೆ ಸದ್ಯಕ್ಕಿಲ್ವಂತೆ
ಬೆಂಗಳೂರು : ಕೊರೊನಾ ಮೂರನೇ ಅಲೆ ಅತಿ ಭಯಂಕರವಾಗಿರುತ್ತೆ. ಮುಖ್ಯವಾಗಿ ಮಕ್ಕಳಿಗೆ ಹೆಚ್ಚಾಗಿ ವಕ್ಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು.
ಭಾರತದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆಯ ಅಬ್ಬರ ಶುರುವಾಗಲಿದೆ ಎನ್ನುವ ಅಭಿಪ್ರಾಯ ಬಹುತೇಕ ತಜ್ಞರಲ್ಲಿತ್ತು.
ಆದ್ರೆ ಇದೀಗ ಸದ್ಯಕ್ಕೆ ಕೊರೊನಾ ಮೂರನೇ ಅಲೆ ಇಲ್ಲ ಎಂದು ಹೇಳಿದ್ದಾರೆ ತಜ್ಞರು.
ಕಳೆದ ಕೆಲ ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ಹಾವು ಏಣಿ ಆಟವಾಡುತ್ತಿದೆ.
ಆದರೂ ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ.
ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮೂರನೇ ಅಲೆಯ ಆತಂಕ ದೂರವಾಗಿದೆ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧ ಭಾರತದಲ್ಲಿ ಲಸಿಕೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಿದೆ.
ಹಾಗಾಗಿ ಸದ್ಯಕ್ಕೆ ಮೂರನೇ ಅಲೆಯ ಆತಂಕವಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.









