ಹೊಸ ಆಲ್ ರೌಂಡರ್ ಗೆ ಗವಾಸ್ಕರ್ ಜೈ : ಹಾರ್ದಿಕ್ ಪಾಂಡ್ಯ ಪವರ್ ಆಫ್ ಆಯ್ತಾ..?
ಬೆಂಗಳೂರು : ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸ್ಫೋಟಕ ಬ್ಯಾಟಿಂಗ್, ಉತ್ತಮ ಬೌಲಿಂಗ್, ಅದ್ಭುತ ಬೌಲಿಂಗ್ ಗುರುತಿಸಿಕೊಂಡ ಆಟಗಾರ. ಅತೀ ಕಡಿಮೆ ಅವಧಿಯಲ್ಲಿ ಫೇಮು ನೇಮು ಎರಡನ್ನೂ ಒಟ್ಟಿಗೆ ಗಳಿಸಿದ ಅದೃಷ್ಠವಂತ. ಆದ್ರೆ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಮೈದಾನದಲ್ಲಿ ಹಾರ್ದಿಕ್ ಆಟ ನಡೆಯುತ್ತಿಲ್ಲ. ಮುಖ್ಯವಾಗಿ ಬೌಲಿಂಗ್ ನಿಂದ ಹಾರ್ದಿಕ್ ದೂರ ಇರೋದು ಹಾಗೇ ಬ್ಯಾಟಿಂಗ್ ನಲ್ಲಿ ಈ ಮೊದಲಿನ ಲಯ ಕಾಣಿಸುತ್ತಿಲ್ಲ.
ಈ ಮಧ್ಯೆ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ಹೊಸ ಆಲ್ ರೌಂಡರ್ ಬೆಳಕಿಗೆ ಬಂದಿದ್ದಾನೆ. ಆತನ ಆಟಕ್ಕೆ ದಿಗ್ಗಜ ಕ್ರಿಕೆಟ್ ಆಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆ ಆಟಗಾರ ಬೇರೆ ಯಾರು ಅಲ್ಲ.. ಕೊಲ್ಕತ್ತಾ ನೈಟ್ ರೈಡರ್ಸ್ ನ ಓಪನರ್ ವೆಂಕಟೇಶ್ ಅಯ್ಯರ್..!!!
ಹೌದು..!! ಐಪಿಎಲ್ ನ ಮೊದಲಾರ್ಧದಲ್ಲಿ ಕೆಕೆಆರ್ ತಂಡದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಮುಖ್ಯವಾಗಿ ಓಪನ್ ಗಳ ಸಮಸ್ಯೆ ಕೊಲ್ಕತ್ತಾ ತಂಡಕ್ಕೆ ತಲೆ ಬಿಸಿ ತಂದಿತ್ತು. ಇದೀಗ ಆ ಸಮಸ್ಯೆಗೆ ವೆಂಕಟೇಶ್ ಅಯ್ಯರ್ ರೂಪದಲ್ಲಿ ಪರಿಹಾರ ಸಿಕ್ಕಿದೆ.
ಐಪಿಎಲ್ ನಲ್ಲಿ ವೆಂಕಟೇಶ್ ಅಯ್ಯರ್, ಈವರೆಗೂ ನಾಲ್ಕು ಪಂದ್ಯಗಳನ್ನಾಡಿದ್ದು, 126 ರನ್ ಗಳಸಿದ್ದು, 2 ವಿಕೆಟ್ ಪಡೆದಿದ್ದಾರೆ. ಹಾಗೇ ಫೀಲ್ಡಿಂಗ್ ನಲ್ಲೂ ವೆಂಕಟೇಶ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೀಗಾಗಿ ಸಾಮಾನ್ಯವಾಗಿಯೇ ಅಯ್ಯರ್ ಎಲ್ಲರ ಗಮನ ಸೆಳೆಯುತ್ತಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ವೆಂಕಟೇಶ್ ಅಯ್ಯರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಇಂತಹ ಆಲ್ ರೌಡರ್ ಗಾಗಿ ಟೀಂ ಇಂಡಿಯಾ ಹುಡುಕುತ್ತಿದೆ ಎಂದಿದ್ದಾರೆ.
“ಟೀಂ ಇಂಡಿಯಾ ಪ್ರಸ್ತುತ ವೆಂಕಟೇಶ್ ಅಯ್ಯರ್ ರಂತಹ ಆಲ್ ರೌಂಡರ್ ಅನ್ನು ಹುಡುಕುತ್ತಿದೆ. ಅಯ್ಯರ್ ಉತ್ತಮವಾಗಿ ಯಾರ್ಕರ್ ಗಳನ್ನು ಹಾಕುತ್ತಿದ್ದಾರೆ. ಬ್ಯಾಟ್ಸ್ಮನ್ಗಳಿಗೆ ದೊಡ್ಡ ಹೊಡೆತಗಳನ್ನು ಆಡಲು ಅವರು ಬಿಡುತ್ತಿಲ್ಲ. ಬ್ಯಾಟಿಂಗ್ಗೆ ಬಂದಾಗ ಶಾರ್ಟ್ ಬಾಲ್ ಗಳನ್ನು ಚೆನ್ನಾಗಿ ಆಡುತ್ತಿದ್ದಾರೆ. ಚೆನ್ನಾಗಿ ಕವರ್ ಡ್ರೈವ್ ಮಾಡ್ತಿದ್ದಾರೆ ಎಂದಿದ್ದಾರೆ.









