ಐಪಿಎಲ್ ಸೀಸನ್ 14ರ ಪ್ಲೇ-ಆಫ್ನ ಒಂದು ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ಭದ್ರ ಮಾಡಿಕೊಂಡಿದೆ. ಎರಡನೇ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣಿಟ್ಟಿದೆ. ಮೂರು ಮತ್ತು 4ನೇ ಸ್ಥಾನಕ್ಕೆ ದೊಡ್ಡ ಹೋರಾಟ ನಡೆಯುತ್ತಿದೆ. ಒಂದು ಸಣ್ಣ ತಪ್ಪು ದುಬಾರಿ ಆಗುವ ಪಂದ್ಯಗಳು ಇನ್ನೂ ಬಾಕಿ ಇವೆ. ಸೂಪರ್ ಶನಿವಾರದ ಮೊದಲ ಮ್ಯಾಚ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಶಾರ್ಜಾದಲ್ಲಿ ಮುಖಾಮುಖಿಯಾಗಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತುಮುಂಬೈ ಇಂಡಿಯನ್ಸ್ ಗೆಲುವಿಗಾಗಿ ದೊಡ್ಡ ಹೋರಾಟ ಮಾಡುವುದು ಖಚಿತ.
ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯ ಪೈಕಿ 7 ನ್ನು ಗೆದ್ದು 14 ಪಡೆದು ಪ್ಲೇ-ಆಫ್ಗೆ ಹತ್ತಿರದಲ್ಲಿದೆ. ಆದರೆ ಸ್ಥಾನ ಗ್ಯಾರೆಂಟಿ ಆಗಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಕ್ವಾಲಿಫೈಯರ್ ಆಡಬೇಕಾದರೆ ಮೊದಲ ಎರಡು ಸ್ಥಾನದಲ್ಲಿ ಒಂದನ್ನು ಪಡೆಯಬೇಕು. ಹೀಗಾಗಿ ಡೆಲ್ಲಿ ಮುಂಬೈ ವಿರುದ್ಧ ಗೆಲುವಿನ ಕನಸು ಕಾಣುತ್ತಿದೆ. ಆರ್ಸಿಬಿ ಮತ್ತು ಸಿಎಸ್ಕೆ ವಿರುದ್ಧ ಡೆಲ್ಲಿಗೆ ಕೊನೆಯ ಎರಡು ಪಂದ್ಯ ಇರುವುದರಿಂದ ರಿಸಕ್ ಬೇಡ ಅನ್ನುವ ಯೋಚನೆ ಡೆಲ್ಲಿಗಿದೆ. ಹೀಗಾಗಿ ಎಡವಿದ್ರೆ ಕಷ್ಟ ಅನ್ನುವ ಮಟ್ಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಬಂದಿದೆ. ಪೃಥ್ವಿ ಷಾ ಫಿಟ್ ಆಗಿದ್ದು ಆಡಲು ಸಿದ್ಧರಾಗಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಕೂಡ ತಂಡ ಸೇರುವ ನಿರೀಕ್ಷೆ ಇದೆ. ಹೀಗಾಗಿ ಡೆಲ್ಲಿ ಮುಂಬೈ ವಿರುದ್ಧ ಗೆಲುವಿನ ಕನಸು ಕಾಣುತ್ತಿದೆ.
ಮುಂಬೈ 11 ಪಂದ್ಯಗಳಿಂದ 10 ಅಂಕ ಪಡೆದಿದೆ. ಇನ್ನುಳಿದ 3 ಪಂದ್ಯಗಳನ್ನು ಗೆದ್ದರೆ ಮುಂಬೈ ಕೂಡ ಪ್ಲೇ-ಆಫ್ಗೇರಲಿದೆ. ಮುಂಬೈ ತನ್ನ ಕೊನೆಯ ಎರಡು ಪಂದ್ಯಗಳನ್ನು ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆಡಲಿರುವುದರಿಂದ ಸ್ವಲ್ಪ ರಿಲೀಫ್ನಲ್ಲಿದೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ-ಆಫ್ನ 2ನೇ ಸ್ಥಾನಕ್ಕೆ ಫೈಟ್ ನೀಡಬಹುದು ಅನ್ನುವ ಲೆಕ್ಕಾಚಾರ ಮುಂಬೈ ತಂಡದ್ದು. ಮುಂಬೈ ತಂಡ ಫಾರ್ಮ್ಗೆ ಬಂದಿದ್ದರೂ ಸೂರ್ಯಕುಮಾರ್ ಯಾದವ್ ರನ್ ಬರ ಅನುಭವಿಸುತ್ತಿರುವುದು ತಲೆನೋವಾಗಿದೆ. ರಾಹುಲ್ ಚಹರ್ ಬೌಲಿಂಗ್ ಫಾರ್ಮ್ ಬಗ್ಗೆಯೂ ಮುಂಬೈಗೆ ತಲೆನೋವಿದೆ.
ಇನ್ನು ಶಾರ್ಜಾದ ಸ್ಲೋ ಪಿಚ್ ಕೂಡ ಎರಡೂ ತಂಡದ ಮೇಲೆ ಪರಿಣಾಮ ಬೀರಲಿದೆ. ಡೆಲ್ಲಿ ಈಗಾಗಲೇ ಇಲ್ಲಿ ಒಂದು ಪಂದ್ಯ ಆಡಿ ಸೋತಿದೆ. ಮುಂಬೈ ಕೂಡ ಒಂದು ಪಂದ್ಯ ಆಡಿದೆ. ಒಟ್ಟಿನಲ್ಲಿ ಎರಡು ತಂಡಗಳು ಗೆಲುವಿಗಾಗಿ ಹೋರಾಟ ಮಾಡುತ್ತಿರುವುದರಿಂದ ರೋಚಕ ಪಂದ್ಯ ನಡೆಯುವುದು ಗ್ಯಾರೆಂಟಿ
ಸಂಭಾವ್ಯ XI
ಡೆಲ್ಲಿ ಕ್ಯಾಪಿಟಲ್ಸ್:
- ಪೃಥ್ವಿ ಷಾ, 2. ಶಿಖರ್ ಧವನ್, 3. ಶ್ರೇಯಸ್ ಅಯ್ಯರ್, 4. ರಿಷಭ್ ಪಂತ್, 5. ಲಲಿತ್ ಯಾದವ್, 6. ಶಿಮ್ರನ್ ಹೆಟ್ಮಯರ್, 7. ಅಕ್ಸರ್ ಪಟೇಲ್, 8. ಆರ್.ಅಶ್ವಿನ್, 9. ಕಗಿಸೊ ರಬಾಡಾ, 10. ಅನ್ರಿಚ್ ನೋರ್ಟ್ಜೆ, 11. ಆವೇಶ್ ಖಾನ್
ಮುಂಬೈ ಇಂಡಿಯನ್ಸ್:
- ರೋಹಿತ್ ಶರ್ಮಾ, ಕ್ವಿಂಟಾನ್ ಡಿ ಕಾಕ್, 3. ಸೂರ್ಯ ಕುಮಾರ್ ಯಾದವ್, 4. ಸೌರಭ್ ತಿವಾರಿ, 5. ಕಿರಾನ್ ಪೊಲ್ಲಾರ್ಡ್, 6. ಹಾರ್ದಿಕ್ ಪಾಂಡ್ಯಾ, 7. ಕೃನಾಲ್ ಪಾಂಡ್ಯಾ, 8. ನಾಥನ್ ಕೌಲ್ಟರ್ ನಿಲ್, 9. ರಾಹುಲ್ ಚಹರ್, 10. ಟ್ರೆಂಟ್ ಬೊಲ್ಟ್, 11. ಜಸ್ಪ್ರಿತ್ ಬುಮ್ರಾ









