ಇಂದು ಅಧಿಕೃತವಾಗಿ ವಿಜಯನಗರ ಜಿಲ್ಲೆ ಉದಯ Vijayanagar saaksha tv
ಹೊಸಪೇಟೆ : ಇಂದು ರಾಜ್ಯದ ನೂತನ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
ಹಂಪಿಯ ಹೆಬ್ಬಾಗಿಲು ಆಗಿರುವ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೊಸ ಜಿಲ್ಲೆಯ ಆರು ತಾಲೂಕುಗಳ ಮನೆ-ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆ ಉದ್ಘಾಟನೆ ನಿಮಿತ್ತ ಇಂದು ಮತ್ತು ನಾಳೆ ವಿಜಯನಗರ ಉತ್ಸವ ನಡೆಯಲಿದೆ.
ಇನ್ನು ವಿಜಯನಗರ ಉತ್ಸವಕ್ಕೆ ಈಗಾಗಲೇ ಸಕಲ ರೀತಿಯ ಸಿದ್ದತೆಗಳು ನಡೆದಿದೆ.









