ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ..!
ಗಾಂಧಿ ಜಯಂತಿ ಪ್ರಯುಕ್ತ ಲೇಹ್ ನಲ್ಲಿ ಬೃಹತ್ ಭಾರತೀಯ ರಾಷ್ಟ್ರ ಧ್ವಜ ಅನಾವರಣ
ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲಾದ ಧ್ವಜ
225 × 150 ಅಡಿ ಉದ್ದದ ರಾಷ್ಟ್ರೀಯ ಧ್ವಜ
ಗಾಂಧಿ ಜಯಂತಿಯ ವಿಶೇಷ ದಿನದ ಪ್ರಯುಕ್ತ ಲಡಾಖ್ ರಾಜಧಾನಿ ಲೇಹ್‌ನಲ್ಲಿ ಬೃಹತ್ ಭಾರತೀಯ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಲಾಯಿತು. ಅಲ್ಲದೇ ಇದು ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವಾಗಿದೆ ಮತ್ತು ಒಂದು ಟನ್ ತೂಗುತ್ತದೆ. ಇದನ್ನ ತಯಾರಿಸಲು ಸುಮಾರು 1.5 ತಿಂಗಳುಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಧ್ವಜದ ರಚನೆಕಾರರಾದ ಮುಂಬೈನ ಖಾದಿ ಡೈಯರ್ಸ್ ಮತ್ತು ಪ್ರಿಂಟರ್ಸ್‌ನ ಡಿಎನ್ ಭಟ್ ತಿಳಿಸಿದರು.
#WATCH World's largest Khadi national flag installed in Leh town, inaugurated by Ladakh Lieutenant Governor RK Mathur
Army Chief General Manoj Mukund Naravane also present pic.twitter.com/6lNxp0lM0n
— ANI (@ANI) October 2, 2021
ಧ್ವಜವನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್ ಕೆ ಮಾಥುರ್ ಉದ್ಘಾಟಿಸಿದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಹಿಂದೆ, ಗಾಂಧಿ ಜಯಂತಿಯನ್ನು ಆಚರಿಸಲು ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರನ್ನು ಪ್ರೇರೇಪಿಸಿದ್ದರು. “ನಾವು ಖಾದಿ ಉತ್ಪನ್ನಗಳನ್ನು ಖರೀದಿಸೋಣ ಮತ್ತು ಬಾಪು ಜಯಂತಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸೋಣ” ಎಂದು ಅವರು ಇತ್ತೀಚಿನ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ಹೇಳಿದ್ದರು.








