4 ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಡಿದ ಚೇತು-ಸ್ಯಾಮ್
ಎಲ್ಲರೂ ಅಂದುಕೊಂಡದ್ದು ನಿಜವಾಗಿದೆ. ಟಾಲಿವುಡ್ ಸ್ಟಾರ್ ಜೋಡಿ ಸಮಂತಾ-ನಾಗ ಚೈತನ್ಯ, ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.
ಈ ವಿಚಾರವನ್ನು ನಾಗ್ ಚೈತನ್ಯ, ಸಮಂತಾ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ತುಂಬಾ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಚಾಯ್ ಮತ್ತು ನಾನು ನಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲಿದ್ದೇವೆ.
ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ.
ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ.
ಹತ್ತು ವರ್ಷಗಳ ಸ್ನೇಹ ಕೊನೆಗೊಳ್ಳುತ್ತಿದೆ, ಆದರೆ ನಾವು ಬೇರೆಯಾಗಿದ್ದರೂ ನಾವು ಸ್ನೇಹಿತರಾಗಿ ಒಟ್ಟಿಗೆ ಇರುತ್ತೇವೆ ಎಂದು ಸಮಂತ ಇನ್ಸ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಕಷ್ಟು ದಿನಗಳಿಂದ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಅಕ್ಕಿನೇನಿ ಕುಟುಂಬ ಎಲ್ಲೂ ಮಾತನಾಡಿರಲಿಲ್ಲ.









