ಸ್ಪೇನ್ ನಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ..!
112 ವರ್ಷಗಳ ಕಾಲ ಬದುಕಿರುವ ಸ್ಪೇನ್ ನ ಸ್ಯಾಟರ್ನಿನೊ ಎಂಬುವವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ. ಸ್ಪೇನ್ನ ಸ್ಯಾಟರ್ನಿನೊ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಇನ್ನೂ ಶಾಂತಿಯಿಂದ ಜೀವನ ನಡೆಸಿಕೊಂಡು ಬಂದಿದ್ದು, ಇದೇ ದೀರ್ಘಾಯುಷ್ಯದ ರಹಸ್ಯ ಎಂದಿದ್ದಾರೆ ಸ್ಯಾಟರ್ನಿನೊ.
4.92 ಅಡಿ ಎತ್ತರವಿರುವ ಅವರು ಶೂ ತಯಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಫೂಟ್ಬಾಲ್ ಅಭಿಮಾನಿಯಾಗಿದ್ದು, ಯಾವಾಗಲೂ ಫೂಟ್ಬಾಲ್ ಆಟವನ್ನು ಆಡುತ್ತಿದ್ದೆ ಎಂದಿದ್ದಾರೆ. ಅಲ್ಲದೇ ತಮ್ಮ ತಂಡವನ್ನೇ ರಚಿಸಿ ಆ ತಂಡದೊಡನೆ ಫೂಟ್ಬಾಲ್ ಆಟದಲ್ಲಿ ಸ್ಪರ್ಧಿಸತ್ತಿದ್ದೆ ಎಂದು ಕೂಡ ಮಾಧ್ಯಮದವರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಯಾಟರ್ನಿನೊ ಮತ್ತು ಪತ್ನಿ ಆ್ಯಂಟೋನಿನಾ ದಂಪತಿಗೆ 7 ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿದ್ದಾನೆ. 14 ಮೊಮ್ಮಕ್ಕಳು ಇದ್ದಾರೆ.
ICYMI: We verified the world's oldest living man at the age of 112.
— Guinness World Records (@GWR) September 30, 2021