“ಅವನಿನ್ನೂ ಮಗು ಉಸಿರಾಡಲು ಬಿಡಿ” : ಶಾರುಖ್ ಪುತ್ರನ ಬೆಂಬಲಕ್ಕೆ ನಿಂತ ಸುನಿಲ್ ಶೆಟ್ಟಿ
ಮುಂಬೈ : ಡ್ರಗ್ಸ್ ಪ್ರರಕಣದಲ್ಲಿ ಎಸ್ ಸಿಬಿ ಬಲೆಗೆ ಸಿಲುಕಿಕೊಂಡಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಬಂಧನದ ಬೆನ್ನಲ್ಲೇ ನೆಟ್ಟಿಗರು ಶಾರುಖ್ ಹಾಗೂ ಪುತ್ರನ ಬಗ್ಗೆ ಟ್ರೋಲ್ ಗಳನ್ನ ಮಾಡೋದಕ್ಕೆ ಶುರುಮಾಡಿದ್ದಾರೆ. ಈ ನಡುವೆ ಶಾರುಖ್ ಪುತ್ರ ಆರ್ಯನ್ ಬೆಂಬಲಕ್ಕೆ ನಿಂತಿರುವ ಸುನಿಲ್ ಶೆಟ್ಟಿ ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದಿದ್ದಾರೆ.
ಇದೇ ವೇಳೆ ಬಾಲಿವುಡ್ ಮೇಲೆ ಮಾಧ್ಯಮದವರು ಮುರಿದು ಬೀಳುವುದು ಸಾಮಾನ್ಯ ಎಂಬಂತಾಗಿದೆ. ಯಾವಾಗಲೇ ಬಾಲಿವುಡ್ ಉದ್ಯಮದಲ್ಲಿ ಸಣ್ಣದಾಗಿ ಏನಾದರೂ ಆದರೂ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತದೆ. ಇದರಿಂದ ಸಾಮಾನ್ಯ ಜನರು ಇದೇ ನಿಜ ಎಂದುಕೊಳ್ಳುತ್ತಾರೆ. ಈಗ ನಡೆದಿರುವ ಘಟನೆಯಲ್ಲಿ ನಿಜವಾದ ವರದಿಗಳು ಹೊರಗೆ ಬರಲಿ. ಅಲ್ಲಿಯವರೆಗೆ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಸದ್ಯ ಆರ್ಯನ್ ಎನ್ ಸಿಬಿ ಅಧಿಕಾರಿಗಳ ವಶದಲ್ಲಿದ್ದು, ಅವರ ಮೊಬೈಲ್ ಅನ್ನು ಅಧಿಕಾರಿಗಳು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಫೋನ್ ಚಾಟ್ ಲಿಸ್ಟ್ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.
ಶನಿವಾರ ಮುಂಬೈ ಸಮುದ್ರದ ಮಧ್ಯದಲ್ಲಿ ಐಶಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಇದರ ಖಚಿತ ಮಾಹಿತಿ ತಿಳಿದ ಎನ್‌ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿದ್ದ ಶಾರೂಖ್ ಪುತ್ರ ಸೇರಿ ಒಟ್ಟು 10 ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಎಂಡಿಎ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
#WATCH | When a raid is conducted at a place, many people are taken into custody. We assume that a particular boy must have consumed it (drugs). The process is on. Let's give that child a breather. Let real reports come out: Actor Sunil Shetty on NCB raid at an alleged rave party pic.twitter.com/qYaYSsxkyi
— ANI (@ANI) October 3, 2021