ಕೆ.ಎಲ್.ರಾಹುಲ್ ಗೆ ನಾಯಕತ್ವದ ಕೌಶಲ್ಯಗಳಿಲ್ವಂತೆ : ಅಜಯ್ ಜಡೇಜಾ ಹೇಳಿದ್ದು
ಮುಂಬೈ : ಟಿ-20 ವಿಶ್ವಕಪ್ ಬಳಿಕ ಕೊಹ್ಲಿ ಟಿ-20 ತಂಡದ ನಾಯತ್ವದಿಂದ ಕೆಳಗಿಳಿಯೋದು ಪಕ್ಕಾ ಆಗಿದೆ.
ಹೀಗಾಗಿ ಮುಂದಿನ ನಾಯಕ ಯಾರು ಎಂಬ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ. ಮುಂದಿನ ಕ್ಯಾಪ್ಟನ್ ರೇಸ್ ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹೆಸರು ಕೂಡ ಕೇಳಿಬಂದಿದೆ.
ಸಾಕಷ್ಟು ದಿಗ್ಗಜ ಕ್ರಿಕೆಟಿಗರು ಕೂಡ ಕೆ.ಎಲ್. ರಾಹುಲ್ ಮುಂದೊAದು ದಿನ ಟೀಂ ಇಂಡಿಯಾದ ನಾಯಕರಾಗಲಿದ್ದಾರೆ ಅನ್ನೋ ಮಾತುಗಳನ್ನಾಡಿದ್ದಾರೆ.
ಈ ಮಧ್ಯೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ, ಕೆ.ಎಲ್.ರಾಹುಲ್ ಗೆ ನಾಯಕತ್ವ ಕೌಶಲ್ಯಗಳ ಕೊರತೆಯಿದೆ ಎಂದು ವಿಶ್ಲೇಷಿಸಿದ್ದಾರೆ.
ಕ್ರಿಕ್ ಬಜ್ ಜೊತೆ ಮಾತನಾಡುತ್ತಾ ಅಜಯ್ ಜಡೇಜಾ, ರಾಹುಲ್ ಕಳೆದ ಎರಡು ವರ್ಷಗಳಿಂದ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆದ್ರೆ ಒಮ್ಮೆಯೂ ಪ್ಲೇ ಆಫ್ ತಲುಪಲು ಸಾಧ್ಯವಾಗಿಲ್ಲ. ಕರ್ನಾಟಕ ಬ್ಯಾಟರ್ ರಾಹುಲ್ ನಾಯಕನಾಗಿ ತುಂಬಾ ಅನುಸರಿಸುವ ಗುಣಕ್ಕೆ ಮಾರು ಹೋಗಿದ್ದಾರೆ.
ಮೃದುವಾಗಿ ಮಾತನಾಡುತ್ತಾರೆ ಅವರಲ್ಲಿ ಚುರುಕುತನವಿಲ್ಲ. ನನಗೆ ಅವರು ಒಬ್ಬ ನಿಜವಾದ ಲೀಡರ್ ಎಂಬ ಭಾವನೆ ಯಾವಾಗಲೂ ಅನ್ನಿಸಿಲ್ಲ ಎಂದಿದ್ದಾರೆ.
ಇನ್ನು ಟೀಂ ಇಂಡಿಯಾದ ನಾಯಕರಾಗಬೇಕು ಎನ್ನುವವರು ತಮ್ಮದೇಯಾದ ಫಿಲಾಸಫಿ ಹೊಂದಿರುತ್ತಾರೆ. ಆ ಗುಣ ರಾಹುಲ್ ಅವರಲ್ಲಿ ನನಗೆ ಕಾಣುತ್ತಿಲ್ಲ.
ಅವರು ತುಂಬಾ ಮೃದುವಾಗಿ ಮಾತನಾಡುತ್ತಾರೆ. ಎಲ್ಲದರಲ್ಲೂ ಹೊಂದಿಕೊಳ್ಳಲು ಬಯಸುತ್ತಾರೆ. ಇದು ಒಳ್ಳೆಯದೇ ಆಗಿದ್ದರೂ ಅವರಿಗೆ ತಮ್ಮದೇ ಆದ ಫಿಲಾಸಫಿಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.









