ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿರುವ ರಿಲಯನ್ಸ್ ಜಿಯೊ ಬಳಕೆದಾರರು
ರಿಲಯನ್ಸ್ ಜಿಯೊ ನೆಟ್‌ವರ್ಕ್ ಅನೇಕ ಬಳಕೆದಾರರಿಗೆ ಸ್ಥಗಿತಗೊಂಡಿದೆ. ಈ ಬಗ್ಗೆ ಬಳಕೆದಾರರು ಟ್ವಿಟರ್ ಮೂಲಕ ಸಮಸ್ಯೆಯ ಬಗ್ಗೆ ಮಾಹಿತಿ ಹಂಚಿಕೊಳ್ತಾಯಿದ್ದಾರೆ. ಹೌದು.. ಟ್ವಿಟ್ಟರ್ ನಲ್ಲಿ ಹಲವರು ಜಿಯೋ ನೆಟ್ ವರ್ಕ್ ಕೆಲ ಗಂಟೆಗಳಿಂದ ಸೇವೆ ಸ್ಥಗಿತಗೊಳಿಸಿದ್ದಾಗಿ ದೂರಿದ್ದಾರೆ. ಕೆಲವು ಬಳಕೆದಾರರು ಬೆಳಗಿನಿಂದಲೇ ಜಿಯೋ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೂಡ ವರದಿಯಾಗಿದೆ. ಕೆಲವು ಜಿಯೋ ಬಳಕೆದಾರರು ಜಿಯೋದ ಬ್ರಾಡ್ ಬ್ಯಾಂಡ್ ಸಂಪರ್ಕ ಕೂಡ ಕಡಿಮೆಯಾಗಿದೆ ಎಂದು ದೂರಿದ್ದಾರೆ.
ಇನ್ನೂ ಸಾವಿರಾರು ಜಿಯೋ ಬಳಕೆದಾರರು ಪ್ರಸ್ತುತ ಕೆಲವು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 4,000 ಕ್ಕಿಂತ ಹೆಚ್ಚು ಬಳಕೆದಾರರು ಜಿಯೋ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 40 ಪ್ರತಿಶತದಷ್ಟು ಜನರು ಈ ಸಮಸ್ಯೆ ಎದುರಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ನೆಟ್‌ವರ್ಕ್ ಸಮಸ್ಯೆಯು ಮಧ್ಯಪ್ರದೇಶ, ಛತ್ತೀಸ್‌ಗಢ, ಮುಂಬೈ, ದೆಹಲಿ, ಬೆಂಗಳೂರು ಮತ್ತು ಇತರ ಬಹುತೇಕ ನಗರಗಳಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.








