ಮಂಗಳೂರು : ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಪ್ರತ್ಯೇಕ ತಂಡದಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಂಪ್ವೆಲ್ ಮೇಲ್ಸೇತುವೆಯ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮತ್ತು ತಜ್ಞ ಇಂಜಿನಿಯರ್ಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರಸ್ತೆ ಸಮತಟ್ಟುಗೊಳಿಸಿ ಮಣ್ಣು ಹಾಕಿದ ಬಳಿಕ ನಿರ್ಮಿಸಿದ ತಡೆಗೋಡೆಯಲ್ಲಿ ಸಣ್ಣ ಬಿರುಕು ಉಂಟಾಗಿತ್ತು. ಅದನ್ನು ತಕ್ಷಣ ದುರಸ್ತಿಪಡಿಸಲಾಗಿದೆ. ಇದರಿಂದ ಮೇಲ್ಸೇತುವೆಗೆ ಯಾವುದೇ ಹಾನಿಯಾಗಿಲ್ಲ ಅಧಿಕಾರಿಗಳು ತಿಳಿಸಿದರು.
ಆದರೂ ಕಾಮಗಾರಿಯಲ್ಲಿ ಏನಾದರೂ ಲೋಪ ಉಂಟಾಗಿದೆಯೆ? ಎಂಬುದರ ಬಗ್ಗೆ ಪ್ರತ್ಯೇಕ ತಂಡದಿಂದ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸಂಸದರು ಸೂಚಿಸಿದರು.








