ಮೋದಿ ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ : ಎಸ್.ಎಂ.ಕೃಷ್ಣ
ಮೈಸೂರು : ಮೋದಿ ಅವರು ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಆಡಳಿತ ನೋಡಿದ್ದೇನೆ.
ಮೋದಿ ಅವರು ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ದೇಶದ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಇಂದು ಎಸ್.ಎಂ.ಕೃಷ್ಣ ಅವರು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ.
ಇಂದು ನನಗೆ ಇಂತಹ ಒಂದು ದೊಡ್ಡ ಗೌರವ ಸಿಕ್ಕಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನೆದ ಎಸ್ ಎಂ ಕೆ, ಮೈಸೂರಿನ ಒಂಟಿಕೊಪ್ಪಲ್ ನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ್ದೇನೆ. ಯುವರಾಜ, ಮಹಾರಾಜ ಕಾಲೇಜಿನಲ್ಲಿ ಓದಿದ್ದೇನೆ.
ಮೈಸೂರು ಜೊತೆಯಲ್ಲೇ ನಾನು ಬೆಳೆದೆ. ಪ್ರತಿ ದಿನ ಚಾಮುಂಡಿ ದೇವಿಗೆ ಕೈ ಮುಗಿದೆ ಶಾಲಾ ಕಾಲೇಜಿಗೆ ಹೋಗುತ್ತಿದ್ದೆ. ಚಿನ್ನದ ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. ದಸರಾ ಆಗಾಗ್ಗೆ ಪರಿವರ್ತನೆ ಆಗುತ್ತಾ ಬಂದಿದೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಮುಂದುವರೆದು ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ ಎಸ್.ಎಂ.ಕೆ, ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಒಳ್ಳೆಯ ಕೆಲಸ ಮಾಡಿ ದೇಶವನ್ನು ಕಟ್ಟುತ್ತಿದ್ದಾರೆ.
ನಾನು ಬಹಳಷ್ಟು ಆಡಳಿತ ನೋಡಿದ್ದೇನೆ. ಮೋದಿ ಅವರು ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ದೇಶದ ಕೆಲಸ ಮಾಡುತ್ತಿದ್ದಾರೆ ಎಂದು ಶುಭ ಹಾರೈಸಿದರು.








![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
