ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯವಾಗಿ ಸೋತರೂ ನೆಟ್ರನ್ ರೇಟ್ ರಾಯಲ್ ಚಾಲೆಂಜರ್ಸ್ ಹತ್ತಿರದಲ್ಲಿ ಇಲ್ಲ. ಇನ್ನೊಂದು ಕಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವುದು ಖಚಿತ. ಲೀಗ್ನ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎದುರಾಗುತ್ತಿದ್ದರೂ ಲೆಕ್ಕಾಚಾರ ಪೇಪರ್ನಲ್ಲಿ ಮಾತ್ರ ವರ್ಕೌಟ್ ಆಗುವ ಹಾಗೆ ಕಾಣುತ್ತಿದೆ.
2ನೇ ಸ್ಥಾನದ ಲೆಕ್ಕಾಚಾರ:
- ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕು ಮತ್ತು 200ಕ್ಕೂ ಹೆಚ್ಚು ರನ್ಗಳಿಸಬೇಕು.
- ಡೆಲ್ಲಿ ಕ್ಯಾಪಿಟಲ್ಸ್ ಚೇಸಿಂಗ್ನಲ್ಲಿ ಕೇವಲ 37 ರನ್ಗಳಿಗೆ ಆಲೌಟ್ ಆಗಬೇಕು
- 163 ರನ್ ಅಥವಾ ಅದಕ್ಕಿಂತ ದೊಡ್ಡ ರನ್ ಅಂತರದ ಜಯಗಳಿಸಿದರೆ ಮಾತ್ರ 2ನೇ ಸ್ಥಾನಕ್ಕೆ ಲಗ್ಗೆ
- ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿದರೆ ಆರ್ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶವೇ ಇರುವುದಿಲ್ಲ
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ ಕ್ವಾಲಿಫೈಯರ್ ಆಡುವ ಲೆಕ್ಕಾಚಾರ ಮಾಡುತ್ತಿದೆ. ಬ್ಯಾಟಿಂಗ್ ಲೈನ್ ಅಪ್ನಲ್ಲಿ ಕೊಂಚ ಸಮಸ್ಯೆ ಇದ್ದರೂ ಬೌಲರ್ಗಳು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.
ಪೃಥ್ವಿ ಷಾ ಮತ್ತು ಶಿಖರ್ ಧವನ್ ಫಾರ್ಮ್ಗೆ ಬರಲಿ ಅಂತ ಡೆಲ್ಲಿ ಪ್ರಾರ್ಥನೆ ಮಾಡುತ್ತಿದೆ. ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಹೆಟ್ಮಯರ್ ಆಟ ಎಲ್ಲವನ್ನೂ ನಿರ್ಧಾರ ಮಾಡಲಿದೆ.
ಮಾರ್ಕಸ್ ಸ್ಟೋಯ್ನಿಸ್ ಫಿಟ್ ಕಡೆ ಕೂಡ ಡೆಲ್ಲಿ ಗಮನ ಕೊಟ್ಟಿದೆ. ರಬಾಡ, ನೋರ್ಟ್ಜೆ ಮತ್ತು ಆವೇಶ್ ಖಾನ್ ಫಾಸ್ಟ್ ಬೌಲಿಂಗ್ ಟ್ರಂಪ್ಕಾರ್ಡ್ಗಳು. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ ವಿಭಾಗವನ್ನು ನೋಡುತ್ತಿದ್ದಾರೆ.
ಇನ್ನು ಆರ್ಸಿಬಿ ಸನ್ರೈಸರ್ಸ್ ವಿರುದ್ಧ ಸಣ್ಣ ಮೊತ್ತವನ್ನು ಚೇಸ್ ಮಾಡುವಾಗ ಎಡವಿದ್ದು ದುಬಾರಿ ಆಗಿದೆ. ಮೇಲ್ನೋಟಕ್ಕೆ ಆರ್ಸಿಬಿ 3ನೇ ಸ್ಥಾನದಲ್ಲೇ ಇರುವುದು ಖಚಿತ. ಹೀಗಾಗಿ ಸೋಲು ಮತ್ತು ಗೆಲುವು ಹೆಚ್ಚು ಲೆಕ್ಕಾಚಾರಕ್ಕೆ ಬರುವುದಿಲ್ಲ. ಆದರೆ ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಳ್ಳಬೇಕಿದೆ. ಉಳಿದಂತೆ ಬೌಲಿಂಗ್ನಲ್ಲೂ ಆರ್ಸಿಬಿ ಡೆಲ್ಲಿಗೆ ಸವಾಲೊಡ್ಡಬಲ್ಲ ಲೈನ್ ಅಪ್ ಇದೆ.
ಸಂಭಾವ್ಯ XI
ಡೆಲ್ಲಿ ಕ್ಯಾಪಿಟಲ್ಸ್
- ಪೃಥ್ವಿ ಷಾ, 2. ಶಿಖರ್ ಧವನ್, 3.ಶ್ರೇಯಸ್ ಅಯ್ಯರ್, 4 ರಿಷಭ್ ಪಂತ್, 5.ಮಾರ್ಕಸ್ ಸ್ಟೋಯ್ನಿಸ್/ ಸ್ಟೀವನ್ ಸ್ಮಿತ್, 6. ಶಿಮ್ರಾನ್ ಹೆಟ್ಮಯರ್, 7.ಅಕ್ಸರ್ ಪಟೇಲ್, 8. ಆರ್.ಅಶ್ವಿನ್,9. ಕಗಿಸೋ ರಬಾಡಾ, 10. ಅನ್ರಿಚ್ ನೋರ್ಟ್ಜೆ, 11.ಆವೇಶ್ ಖಾನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3. ಶ್ರೀಕರ್ ಭರತ್, 4. ಗ್ಲೆನ್ಮ್ಯಾಕ್ಸ್ವೆಲ್, 5. ಎಬಿ ಡಿ ವಿಲಿಯರ್ಸ್, 6. ಡ್ಯಾನ್ ಕ್ರಿಶ್ಚಿಯನ್/ ಕೈಲ್ ಜೇಮಿಸನ್/ ವಹಿಂಡು ಹಸರಂಗ 7. ಶಹಬಾಝ್ ಅಹ್ಮದ್, 8. ಹರ್ಷಲ್ ಪಟೇಲ್, 9. ಜಾರ್ಜ್ ಗಾರ್ಟನ್, 10. ಮೊಹಮ್ಮದ್ ಸಿರಾಜ್ 11. ಯಜ್ವೇಂದ್ರ ಚಹಲ್