ಐಪಿಎಲ್ ಸೀಸನ್ 14ರ ಕಟ್ಟಕಡೆಯ ಲೀಗ್ ಪಂದ್ಯಗಳು ಒಂದೇ ದಿನ ಒಂದೇ ಸಮಯದಲ್ಲಿ ಆರಂಭವಾಗಲಿದೆ. ಶುಭ ಶುಕ್ರವಾರ ಯಾರ ಪಾಲಿಗೆ ಶುಭ, ಯಾರಿಗೆ ಅಶುಭ ಅನ್ನುವುದು ಕೂಡ ನಿರ್ಧಾರವಾಗಲಿದೆ. ಪ್ಲೇ-ಆಫ್ ಲೆಕ್ಕಾಚಾರದಲ್ಲಿರುವ ಮುಂಬೈ ಇಂಡಿಯನ್ಸ್ಗೆ ಸನ್ರೈಸರ್ಸ್ ಹೈದ್ರಾಬಾದ್ ಸವಾಲು ಎದುರಾಗಿದೆ. ಮುಂಬೈ ಅತೀ ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಸನ್ರೈಸರ್ಸ್ ಗೆಲುವಿನ ಮೂಲಕ ಟೂರ್ನಿಗೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿದೆ.
ಮುಂಬೈ ಪ್ಲೇ-ಆಫ್ನಲ್ಲಿ ಸ್ಥಾನ ಪಡೆಯಬೇಕಾದರೆ ಅದ್ಭುತಗಳಿಂದ ಮಾತ್ರ ಸಾಧ್ಯ. ಹೈದ್ರಾಬಾದ್ ವಿರುದ್ಧ ಪಂದ್ಯ ಗೆದ್ದರೂ ರನ್ರೇಟ್ ಲೆಕ್ಕಾಚಾರ ಅಸಾಧ್ಯ ಅನ್ನುವ ಮಟ್ಟದಲ್ಲಿದೆ. ಹೀಗಾಗಿ ಪಂದ್ಯ ಆರಂಭಕ್ಕೆ ಮುನ್ನವೇ ಲೆಕ್ಕಾಚಾರ ಖತಂ ಅನ್ನುವ ಹಾಗಾಗಿದೆ. ಆದರೂ ಮುಂಬೈ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಟೂರ್ನಿಯಿಂದ ಈಗಾಗಲೇ ಗೇಟ್ಪಾಸ್ ಪಡೆದಿರುವ ಸನ್ರೈಸರ್ಸ್ ಗೆಲುವಿನೊಂದಿಗೆ ಗುಡ್ ಬೈ ಹೇಳುವ ಕಾತುರದಲ್ಲಿದೆ. ಆರ್ಸಿಬಿ ವಿರುದ್ಧದ ಗೆಲುವು ಎಸ್ಆರ್ಎಚ್ ವಿಶ್ವಾಸ ಹೆಚ್ಚಿಸಿದೆ. ಕೇನ್ ವಿಲಿಯಮ್ಸನ್ ಮತ್ತು ಟೀಮ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನ ಗೆಲ್ಲುವ ಯೋಚನೆಯಲ್ಲಿದೆ.
ಸಂಭಾವ್ಯ XI
ಮುಂಬೈ ಇಂಡಿಯನ್ಸ್
1.ರೋಹಿತ್ ಶರ್ಮಾ, 2. ಕ್ವಿಂಟಾನ್ ಡಿ ಕಾಕನ್, 3.ಸೂರ್ಯಕುಮಾರ್ ಯಾದವ್, 4. ಸೌರಭ್ ತಿವಾರಿ, 5. ಕಿರಾನ್ ಪೊಲ್ಲಾರ್ಡ್, 6. ಹಾರ್ದಿಕ್ ಪಾಂಡ್ಯಾ, 7. ಕೃನಾಲ್ ಪಾಂಡ್ಯಾ, 8. ನಾಥನ್ ಕೌಲ್ಟರ್ನೆಲ್ , 9. ರಾಹುಲ್ ಚಹರ್, 10. ಜಸ್ಪ್ರಿತ್ ಬುಮ್ರಾ, 11. ಟ್ರೆಂಟ್ ಬೊಲ್ಟ್
ಸನ್ರೈಸರ್ಸ್ ಹೈದ್ರಾಬಾದ್
- ಜೇಸನ್ ರಾಯ್, 2.ವೃದ್ಧಿಮಾನ್ ಸಾಹಾ, 3.ಕೇನ್ ವಿಲಿಯಮ್ಸನ್, 4. ಪ್ರಿಯಮ್ ಗರ್ಗ್, 5. ಅಭಿಷೇಕ್ ಶರ್ಮಾ, 6. ಅಬ್ದುಲ್ ಸಮದ್, 7. ಜೇಸನ್ ಹೋಲ್ಡರ್, 8. ರಶೀದ್ ಖಾನ್, 9. ಭುವನೇಶ್ವರ್ ಕುಮಾರ್, 10. ಸಿದ್ಧಾರ್ಥ್ ಕೌಲ್, 11. ಉಮ್ರನ್ ಮಲಿಕ್