ಮುಂದುವರೆದ ಚೀನಾ ಕಿತಾಪತಿ – ಚೀನಾ ಸೈನಿಕರನ್ನ ವಶಕ್ಕೆ ಪಡೆದ ಭಾರತೀಯ ಸೇನೆ..!
ಪದೇ ಪದೇ ಭಾರತವನ್ನ ಚೀನಾ ಕೆಣಕುತ್ತಲೇ ಇದೆ. ಲಡಾಖ್ ಗಡಿ ಭಾಗದಲ್ಲಿ ಚೀನಾ ಸೇನಾ ಬಲ ಹೆಚ್ಚಿಸುತ್ತಿದೆ. ಇತ್ತೀಚೆಗೆ ಚೀನಾ ಸೇನೆ ಭಾರತೀಯ ಸೈನಿಕರು ಇಲ್ಲದ ಸಮಯ ನೋಡಿಕೊಂಡು ಕಳ್ಳ ಬೆಕ್ಕುಗಳಂತೆ ಭಾರತದ ಗಡಿಯೊಳಗೆ ನುಸುಳಿ ಸೇತುವೆ ಧ್ವಂಸ ಮಾಡಿ ಹೇಡಿಗಳ ರೀತಿ ಪರಾರಿಯಾಗಿದ್ದರು.
ಈ ಬಗ್ಗೆ ಬಾರತೀಯ ಸೇನೆ ಕೂಡ ತನಿಖೆ ನಡೆಸುತ್ತಿದ್ದು, ಮುಂದೇನ್ ಮಾಡಬೇಕು ಅನ್ನೋ ರಣತಂತ್ರವನ್ನೂ ರೂಪಿಸಿಕೊಳ್ತಿದೆ. ಈ ನಡುವೆ ಲಡಾಖ್ ನಲ್ಲಿ ಸಂಘರ್ಷ ಮುಂದುರೆದಿದ್ದು, ಭಾರತೀಯ ಮತ್ತು ಚೀನಾ ಪಡೆಗಳು ಅರುಣಾಚಲ ಪ್ರದೇಶದಲ್ಲಿ ಮುಖಾಮುಖಿಯಾಗುತ್ತಿರುವುದಾಗಿ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಇನ್ನೂ ಸುಮಾರು 200 ಕ್ಕೂ ಹೆಚ್ಚು ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ ಬಳಿಯ ಬಮ್ ಲಾ ಮತ್ತು ಯಾಂಗ್ ಟೆಸ್ ಗಡಿರೇಖೆಯ ಬಳಿ ಇರುವ ಕೆಲವು ಜನನಿಬಿಡ ಬಂಕರ್ ಗಳಿಗೆ ನುಗ್ಗಿ ಅವುಗಳಿಗೆ ಹಾನಿ ಮಾಡಲು ಯತ್ನಿಸಿದ್ದಾರೆ. ಆದ್ರೆ ಚೀನಾ ಸೈನಿಕರ ಈ ಉದ್ಧಟತನವನ್ನ ಭಾರತೀಯ ಸೈನಿಕರು ತಡೆದಿದ್ದಾರೆ. ಅವರ ಕುಕೃತ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ದೇ ಕೆಲವು ಸೈನಿಕರನ್ನೂ ಸಹ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ಲೇ-ಆಫ್ ಲೆಕ್ಕಾಚಾರದಲ್ಲಿರುವ ಮುಂಬೈಗೆ ಸನ್ರೈಸರ್ಸ್ ಸವಾಲು
ಭಾರತೀಯ ಸೇನೆಯ ಸಿಬ್ಬಂದಿಗಳು ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಕೆಲವು ಚೀನೀ ಸೈನಿಕರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು ನಂತರ ಅವರನ್ನಬಿಡುಗಡೆಮಾಡಿದೆ ಎಂದು ಹೇಳಲಾಗಿದೆ. ಸ್ಥಳೀಯ ಮಿಲಿಟರಿ ಕಮಾಂಡರ್ ಗಳು ಈ ವಿಷಯವನ್ನು ಪರಿಹರಿಸಿದ ನಂತರ ಚೀನಾದ ಸೈನಿಕರನ್ನು ಬಿಡುಗಡೆ ಮಾಡಲಾಯಿತು ಎಂದು ಕೆಲ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಗುರುವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಪತ್ರಿಕಾ ಸಂವಾದದಲ್ಲಿ, ಪೂರ್ವ ಲಡಾಖ್‌ನ ಎಲ್‌ಎಸಿಯ ಉದ್ದಕ್ಕೂ ಬಗೆಹರಿಸಲಾಗದ ಸಮಸ್ಯೆಯನ್ನು ಪರಿಹರಿಸಲು ಚೀನಾ ಪಿತೂರಿ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣದ ಮಾರ್ಗದಲ್ಲಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳನ್ನು ಸಂಪೂರ್ಣವಾಗಿ ಅನುಸರಿಸುವ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಚೀನಾ ಕೆಲಸ ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ.
ಐಪಿಎಲ್ 2021 | ಆರ್ ಸಿಬಿ ಎರಡನೇ ಸ್ಥಾನಕ್ಕೇರಲು ಏನ್ ಮಾಡ್ಬೇಕು ಗೊತ್ತಾ..?