ಪಂಡೋರಾ ಪೇಪರ್ ಸೋರಿಕೆ – ಲಿಸ್ಟ್ ನಲ್ಲಿದೆ ಇಬ್ಬರು ಕನ್ನಡಿಗರ ಹೆಸರು
ಪಂಡೋರಾ ಪೇಪರ್ ಲೀಕ್ ಕೇಸ್ – ಇಬ್ಬರು ಕನ್ನಡಿಗರ ಹೆಸರು
ಲಿಸ್ಟ್ ನಲ್ಲಿ ಚಿರಂತನ್ ಮಿರ್ಜಿ, ಉದ್ಯಮಿ ಬಿ ಆರ್ ಶೆಟ್ಟಿ ಹೆಸರು
ಲಿಸ್ಟ್ ನಲ್ಲಿ ಸಚಿನ್ ತೆಂಡುಲ್ಕರ್ , ಅನಿಲ್ ಅಂಬಾನಿ ಸೇರಿ 300 ಕ್ಕೂ ಹೆಚ್ಚು ಭಾರತೀಯರ ಹೆಸರು
2016 ರ ಪನಾಮಾ ಪೇಪರ್ ಲೀಕ್ ಮಾದರಿಯಲ್ಲೇ ಪಂಡೋರಾ ಪೇಪರ್ ಸೋರಿಕೆಯಾಗಿದೆ. ಈ ಪ್ರಕರಣದಲ್ಲಿ ಭಾರತದ ರಾಜಕಾರಣಿಗಳು , ಕ್ರಿಕೆಟಿಗರು , ಸಿನಿಮಾ ಮಂದಿ ಸೇರಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು , ಉದ್ಯಮಿಗಳು ಹೀಗೆ 300 ಕ್ಕೂ ಹೆಚ್ಚು ಜನರ ಹೆಸರುಗಳು ಕೇಳಿಬಂದಿದೆ. ಈ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ , ನೀರವ್ ಮೋದಿ , ಅನಿಲ್ ಅಂಬಾನಿ ಇನ್ನೂ ಸಾಕಷ್ಟು ಜನರ ಹೆಸರಿದೆ.
ಇನ್ನೂ ಇದೇ ಪ್ರಕರಣದಲ್ಲಿ ಇದೀಗ ಇಬ್ಬರು ಕನ್ನಡಿಗರ ಹೆಸರುಗಳು ಕೇಳಿಬಂದಿದೆ. ಮೊದಲನೇಯದ್ದಾಗಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ಮಗ ಚಿರಂತನ್ ಮಿರ್ಜಿ ಮತ್ತೆ ಉದ್ಯಮಿ ಬಿ ಆರ್ ಶೆಟ್ಟಿ ಹೆಸರುಗಳು ಪನಾಮಾ ಪೇಪರ್ ನ ಲಿಸ್ಟ್ ನಲ್ಲಿದೆ.









