ರೈಲಿನಲ್ಲಿಯೇ ಮಹಿಳೆ ಜೊತೆ ಅಸಭ್ಯವಾಗಿ ನಡೆದುಕೊಂಡ NCB ಅಧಿಕಾರಿ ಬಂಧನ
ಮುಂಬೈ : ಪ್ರಸ್ತುತ ಮಹಿಳೆಯರಿಗೆ ಎಲ್ಲೂ ಕೂಡ ಸುರಕ್ಷತೆ ಇಲ್ಲದೆ ಇರುವಂತಹ ವಾತಾವರಣ ನಿರ್ಮಾಣವಾಗ್ತಿದೆ ಎಂದು ಹೇಳುವುದಕ್ಕೆ ದಿನೇ ದಿನೇ ಹೆಚ್ಚಾಗುತ್ತಿರುವ ಕಿರುಕುಳ ಪ್ರಕರಣಗಳು ಸಾಕ್ಷಿ.. ಅದ್ರಂತೆಯೇ ಮಹಾರಾಷ್ಟ್ರದಲ್ಲಿ ನಡೆದಿರುವ ಘಟನೆಯೊಂದು ಈ ರೀತಿಯಾಗಿ ಹೇಳೋದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ರೈಲಿನಲ್ಲಿಯೇ ಸಾರ್ವಜನಿಕವಾಗಿಯೇ NCB ಅಧಿಕಾರಿಯೋರ್ವ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರುವುದೂ ಅಲ್ಲದೇ ಅವರನ್ನ ಅಶ್ಲೀಲವಾಗಿ ಸ್ಪರ್ಶಿಸಿ ಒಳ ಉಡುಪನ್ನು ಹೊರಗೆ ಎಳೆದಿದ್ದಾರೆ. ಸದ್ಯ ಕಾಮುಕ ಅಧಿಕಾರಿಯನ್ನ ಅರೆಸ್ಟ್ ಮಾಡಲಾಗಿದೆ.
ಮಾದಕದ್ರವ್ಯ ನಿಯಂತ್ರಣ ಬ್ಯೂರೋದ ಅಧಿಕಾರಿಯಾದ (35) ದಿನೇಶ್ ಚವ್ಹಾಣ್ ಎಂಬಾತ ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ 25 ವರ್ಷದ ಮಹಿಳೆಗೆ ಕಿರುಕುಳ ನೀಡಿದ್ದು, ಈತನನ್ನ ಬಂಧಿಸಿ ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸಲಾಗಿದೆ. ನವಿ ಮುಂಬೈ ನಿವಾಸಿಯಾಗಿರುವ ದಿನೇಶ್, ಎನ್‌ಸಿಬಿ ಮುಂಬೈನ ಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಕೆಲವು ಕಾಯಿಲೆಯಿಂದ ಬಳಲುತ್ತಿದ್ದು, ಹಲವು ತಿಂಗಳುಗಳಿಂದ ಈತ ರಜೆಯಲ್ಲಿ ಇರೋದಾಗಿ ತಿಳಿದುಬಂದಿದೆ. ತೆಲಂಗಾಣದ ಹೈದರಾಬಾದ್ ನಿಂದ ರೈಲಿನಲ್ಲಿ ಹಿಂದಿರುಗುತ್ತಿದ್ದಾಗ ಅದೇ ರೈಲಿನಲ್ಲೇ ಇದ್ದ ಮಹಿಳೆ ಜೊತೆ ಅಸಭ್ಯವಾಗಿ ನಡೆಕೊಂಡಿರೋದಾಗಿ ಮಹಿಳೆ ಆರೋಪ ಮಾಡಿದ್ದಾರೆ.
ಗುರುವಾರದ ಬೆಳಗಿನಜಾವ ದಿನೇಶ್ ರೈಲಿನಲ್ಲಿದ್ದ 25 ವರ್ಷದ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಆಕೆಯ ಒಳ ಉಡುಪುಗಳನ್ನು ಆಕೆಯ ಬ್ಯಾಗಿನಿಂದ ಹೊರತೆಗೆದು, ಮೂಸಿ ನೋಡಿ ಅವನ ಎದೆಯ ಮೇಲೆ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆ ಕೂಗಾಡಿದಾಗ ಇತರ ಪ್ರಯಾಣಿಕರು ನೆರವಿಗೆ ಬಂದಿದ್ದಾರೆ. ಟಿಕೆಟ್ ಪರೀಕ್ಷಕರು ಮಹಿಳೆಯ ಹೇಳಿಕೆಯನ್ನು ದಾಖಲಿಸಿ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ.








