ಐಪಿಎಲ್ ನಲ್ಲಿ ಚರಿತ್ರೆ ಸೃಷ್ಟಿಸಿದ ಇಶಾನ್ ಕಿಶನ್
ದುಬೈ : ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಇಶಾನ್ ಕಿಶನ್ ಚರಿತ್ರೆ ಸೃಷ್ಠಿಸಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ ಆಫ್ ಸೆಂಚುರಿ ಸಿಡಿಸಿದ ಮೊದಲ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಇಶಾನ್, 16 ಎಸೆತಗಳಲ್ಲಿ ಎಂಟು ಬೌಂಡರಿಗಳು, 2 ಸಿಕ್ಸರ್ ಗಳ ನೆರವಿನಿಂದ ಅರ್ಧಶತಕ ಬಾರಿಸಿದರು.
ಈ ಸೀಸನ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಪೂರೈಸಿದ ಪಟ್ಟಿನಲ್ಲಿ ಕಿಶನ್ ಮೊದಲ ಸ್ಥಾನದಲ್ಲಿದ್ದರೇ ಕಿರಾನ್ ಪೋಲಾರ್ಡ್ (ಮುಂಬೈ ಇಂಡಿಯನ್ಸ್) 17 ಎಸೆತಗಳಲ್ಲಿ ಫಿಫ್ಟಿ ಸಾಧಿಸಿ ಎರಡನೇ ಸ್ಥಾನ.. ಪೃಥ್ವೀ ಶಾ (18 ಎಸೆತಗಳಲ್ಲಿ 50 ರನ್) ಮೂರನೇ ಸ್ಥಾನ.. ಯಶಸ್ವಿ ಜೈಶ್ವಾಲ್ (19 ಎಸೆತ 50 ರನ್) ಸ್ಥಾನದಲ್ಲಿದ್ದಾರೆ.
ಇನ್ನ ಇಶಾನ್ ಕಿಶನ್ ಈ ಹಿಂದೆ 2016 ರಲ್ಲಿ ಕೆಕೆಆರ್ ವಿರುದ್ಧದ ಮ್ಯಾಚ್ ನಲ್ಲಿ 17 ಎಸೆತಗಳಲ್ಲಿ ಹಾಫ್ ಸೆಂಚೂರಿ ಮಾರ್ಕ್ ದಾಟಿದ್ದರು.









