ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸ್ಕೆಚ್ – 700 ಹೈಬ್ರೀಡ್ ಉಗ್ರರು ವಶಕ್ಕೆ..!
ಕಣಿವೆನಾಡು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಮಹಾ ಸ್ಕೆಚ್ ರೂಪಿಸಲಾಗಿದೆ. ಹೈಬ್ರೀಡ್ ಉಗ್ರರನ್ನ ಇದಕ್ಕೆ ಬಳಕೆ ಮಾಡಿಕೊಳ್ಳಲಾಗ್ತಿದ್ದು, ಹಿಂದೂಗಳ ಹತ್ಯೆಗೆ ಸಂಬಂಧಿಸಿದಂತೆ 700 ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರನ್ನ ಭದ್ರತಾ ಪಡೆ ಬಂಧಿಸಿದೆ. ಈ ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ 7 ಮಂದಿಯನ್ನ ಹತ್ಯೆ ಮಾಡಲಾಗಿರುವುದು ತಿಳಿದುಬಂದಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿಗಳು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಉಗ್ರರನ್ನ ಸೆದೆ ಬಡೆಯುವ ಕೆಲಸಕ್ಕೆ ಸೇನೆ ಮುಂದಾಗಿದೆ.
ಉಗ್ರರ ಬಗ್ಗೆ ಅನುಕಂಪ ಹೊಂದಿರೋ 700 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಇವರ ಪೈಕಿ 500 ಮಂದಿ ನಿಷೇಧಿತ ಉಗ್ರ ಅಥವಾ ಧಾರ್ಮಿಕ ಸಂಘಟನೆಗಳ ಲಿಂಕ್ ಹೊಂದಿರೋ ಆರೋಪ ಎದುರಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.