ಟ್ರೋಲ್ ಮಾಡಿದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟ ಮ್ಯಾಕ್ಸಿ
ದುಬೈ : 14ನೇ ಆವೃತ್ತಿ ಐಪಿಎಲ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ಬಿದ್ದಿದೆ.
ಕೆಕೆಆರ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ನಾಲ್ಕು ವಿಕೆಟ್ ಗಳ ಸೋಲನುಭವಿಸಿ ಈ ಬಾರಿಯೂ ಕಪ್ ಗೆಲ್ಲದೇ ನಿರಾಸೆ ಅನುಭವಿಸಿದೆ.
ಇದರಿಂದಾಗಿ ಆರ್ ಸಿಬಿ ಅಭಿಮಾನಿಗಳು ತುಂಬಾ ನಿರಾಸೆಗೊಂಡಿದ್ದರೇ ಮತ್ತೊಂದೆಡೆ ಆರ್ ಸಿಬಿ Haters ಕೆಟ್ಟದಾಗಿ ಟ್ರೋಲ್ ಮಾಡುತ್ತಾ ಪೋಸ್ಟ್ ಮಾಡಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಆರ್ ಸಿಬಿ ತಂಡದ ಮ್ಯಾಕ್ಸ್ ವೆಲ್ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಟ್ರೋಲ್ ಮಾಡಿದವರಿಗೆ ಖಾರವಾಗಿ ಉತ್ತರ ಕೊಟ್ಟಿದ್ದಾರೆ.
ಟ್ರೋಲ್ ಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್, ಈ ಬಾರಿಯ ಐಪಿಎಲ್ ಟೂರ್ನಿ ಅತ್ಯುತ್ತಮವಾಗಿತ್ತು. ದುರಾದೃಷ್ಟವಶಾತ್ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
ನಾವು ಅಂತಿಮ ಹಂತದಲ್ಲಿ ಎಡವಿದೆವು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಕಸಗಳು ಸಂಪೂರ್ಣ ಅಸಹ್ಯಕರವಾಗಿದೆ.
ನಾವು ಕೂಡ ಮನುಷ್ಯರು, ಪ್ರತಿದಿನ ದಿನ ನಮ್ಮ ಕೈಲಾದಷ್ಟು ಉತ್ತಮ ಪ್ರಯತ್ನವನ್ನೇ ನೀಡಿದ್ದೇವೆ. ಕೆಟ್ಟದನ್ನು ಹರಡುವ ಬದಲು ಉತ್ತಮ ವ್ಯಕ್ತಿಯಾಗಿರಲು ಪ್ರಯತ್ನಿಸಿ ಎಂದು ಕಿವಿ ಇಂಡಿದ್ದಾರೆ.
ಇದೇ ವೇಳೆ ಆರ್ ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಮ್ಯಾಕ್ಸ್ ವೆಲ್, ದಯವಿಟ್ಟು ಅವರಂತೆ ನೀವು ಮಾಡಬೇಡಿ ಎಂದು ಇತರೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.








