12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಗೆ ನೊಂದಣಿ ಪ್ರಕ್ರಿಯೆ ಆರಂಭ
12 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 18 ವರ್ಷದ ಒಳಗಿನ ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞರ ಸಮಿತಿ (SEC) ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಿದೆ. ಇತ್ತೀಚೆಗೆ, ಭಾರತದಲ್ಲಿ 12 ವರ್ಷದ ಮಕ್ಕಳಿಗೆ ಲಸಿಕೆಯನ್ನು ಅನುಮೋದಿಸಲಾಗಿದೆ ಮತ್ತು ಈಗ ಈ ಲಸಿಕೆಯನ್ನು 12 ವರ್ಷದಿಂದ 18 ವರ್ಷ ವಯಸ್ಸಿನ ಮಕ್ಕಳಿಗೂ ನೀಡಬಹುದು. Zydus ಅಂದರೆ ZyCoV-D ಲಅಇಕೆಯನ್ನ 12 ವರ್ಷ ಅಥವಾ 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ನೀಡಲು ಶಿಫಾರಸ್ಸು ಮಾಡಲಾಗಿದ್ದು, ಅಧಿಕೃತವಾಗಿ ಅನುಮತಿ ಸಿಕ್ಕರೆ ಇದು ವಿಶ್ವದ ಮೊದಲ DNA ಆಧಾರಿತ ಲಸಿಕೆಯಾಗಬಹುದಾಗಿದೆ.
ಡಿಸೆಂಬರ್ 2021 ರ ವೇಳೆಗೆ ಸುಮಾರು 10 ಮಿಲಿಯನ್ ಡೋಸ್ ಲಸಿಕೆಯನ್ನು ನೀಡಲು ಪ್ರಯತ್ನಿಸುವುದಾಗಿ ಕಂಪನಿಯು ಹೇಳಿದೆ. ಇದು ಭಾರತದಲ್ಲಿ ಅನುಮೋದನೆ ಪಡೆಯುವ 6 ನೇ ಲಸಿಕೆ ಆಗಲಿದೆ ಎನ್ನಲಾಗಿದೆ. ಇದು ಡಿಎನ್ಎ ಆಧಾರಿತ ಲಸಿಕೆಯಾಗಿದ್ದು, ಇದನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಹೇಳಲಾಗಿದೆ. ಈ ಲಸಿಕೆಯ ಪೂರೈಕೆಯನ್ನು ಮುಂದಿನ ತಿಂಗಳಿನಿಂದ ಆರಂಭಿಸಬಹುದು ಎನ್ನಲಾಗಿದೆ. ಆದ್ರೆ ಸ್ಪಷ್ಟವಾಗಿ ದಿನಾಂಕವನ್ನ ತಿಳಿಸಲಾಗಿಲ್ಲ.
ಮೊದಲಿಗೆ, ಈ ಲಸಿಕೆಯ ಕೇವಲ ಒಂದು ಕೋಟಿ ಡೋಸ್‌ಗಳನ್ನು ಪೂರೈಸಲಾಗುವುದು, ನಂತರ ಅದರ ಬೇಡಿಕೆಯನ್ನು ಹೆಚ್ಚಿಸಬಹುದು. ಈ ಲಸಿಕೆಗಾಗಿ ನೋಂದಾಯಿಸಲು ಬಯಸುವ ಯಾರಾದರೂ ಾನ್ ಲೈನ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.
12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ…?
12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ZYDUS ಲಸಿಕೆಗಾಗಿ ನೊಂದಾಯಿಸಿಕೊಳ್ಳಲು ಮೊದಲು ಅಧಿಕೃತ ವೆಬ್‌ಸೈಟ್ ಗೆ ಹೋಗಬೇಕು. ಅದರ ನಂತರ ಮುಖಪುಟದಲ್ಲಿ, ನೀವು ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಮುಂದಿನ ಪುಟದಲ್ಲಿ, ನಿಮ್ಮ ಎಲ್ಲಾ ವಿವರಗಳನ್ನು ನೀವು ಭರ್ತಿ ಮಾಡಬೇಕು.
ವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಹತ್ತಿರದ ಕೇಂದ್ರದಲ್ಲಿರುವ ಸ್ಲಾಟ್ ಬಗ್ಗೆ ಎಲ್ಲಾ ಮಾಹಿತಿ ತೆರೆಯುತ್ತದೆ. ಅದರಲ್ಲಿ, ನಿಮ್ಮ ಸ್ಲಾಟ್‌ನ ದಿನಾಂಕ ಮತ್ತು ಸಮಯವನ್ನು ನೀವು ಆರಿಸಬೇಕಾಗುತ್ತದೆ. ಅದರ ನಂತರ, ನೀವು ಡೌನ್‌ಲೋಡ್ ಮಾಡಬೇಕಾದ ಸ್ಲಿಪ್ ಅನ್ನು ನೀವು ಪಡೆಯುತ್ತೀರಿ. ಅಲ್ಲದೆ, ಆ ಸ್ಲಿಪ್ ನ ಪ್ರಿಂಟ್ ಕಾಪಿಯನ್ನು ತೆಗೆದುಕೊಳ್ಳಿ ಏಕೆಂದರೆ ಅದರ ಮೂಲಕವೇ ನಿಮಗೆ ಲಸಿಕೆ ಹಾಕಲಾಗುತ್ತದೆ.







