ಮತಾಂತರ ಪ್ರಕರಣ ಹೆಚ್ಚಳ | ಚರ್ಚ್, ಕ್ರೈಸ್ತ ಮಿಷನರಿಗಳ ಸಮೀಕ್ಷೆಗೆ ಸೂಚನೆ Survey of Church saaksha tv
ಬೆಂಗಳೂರು : ಮತಾಂತರ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದಲ್ಲಿರುವ ಚರ್ಚ್, ಕ್ರೈಸ್ತ ಮಿಷನರಿಗಳ ಸಮೀಕ್ಷೆ ನಡೆಸುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷರಾಗಿರುವ ಸದನ ಸಮಿತಿವು ಈ ಬಗ್ಗೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದು, ಅಧಿಕೃತ, ಅನಧಿಕೃತ ಚರ್ಚ್ಗಳ ಸಮೀಕ್ಷೆ , ಚರ್ಚ್ಗಳ ಪಾದ್ರಿಗಳು, ಇತರೆ ಸಿಬ್ಬಂದಿ ಮಾಹಿತಿ ಸಂಗ್ರಹಿಸುವಂತೆಯೂ ನಿರ್ದೇಶಿಸಿದೆ.
ಜೊತೆಗೆ ಬಲವಂತದ ಮತಾಂತರ ಸಂಬಂಧ ಪ್ರಕರಣ ದಾಖಲಾಗಿದ್ದರೆ ಆ ಬಗ್ಗೆಯೂ ಮಾಹಿತಿ ನೀಡುವಂತೆಯೂ ತಿಳಿಸಿದ್ದು, ಕೈಸ್ತ ಮಿಷನರಿಗಳಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡುವಂತೆ ಹೇಳಿದೆ
ಇನ್ನು ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ಸದನ ಸಮಿತಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಜೆಡಿಎಸ್ ಎಂಎಲ್ ಸಿ ಬಿ ಎಂ ಫಾರೂಕ್, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಇದ್ದಾರೆ.









