ಪೋರ್ಬ್ಸ್ ಪಟ್ಟಿಯಲ್ಲಿ ‘ಸಾನವಿ’ಗೆ ಮೊದಲ ಸ್ಥಾನ , ‘ರಾಕಿ ಭಾಯ್’ ಗೆ ಯಾವ ಸ್ಥಾನ..!
ಪ್ರಖ್ಯಾತ ಪೋರ್ಬ್ಸ್ ಪಟ್ಟಿಯಲ್ಲಿ ದಕ್ಷಿಣ ಭಾರತ ಸಿನಿಮಾರಂಗದ ಸ್ಟಾರ್ ಗಳು ಸ್ಥಾನ ಪಡೆದಿದ್ದು, ಆಶ್ಚರ್ಯವೆಂಬಂತೆ ಕಿರಿಕ್ ನಟಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿ ಮಿಂಚಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ನಲ್ಲಿ ಪ್ರತಿವರ್ಷ ದೇಶ – ವಿದೇಶದಲ್ಲಿನ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿ ರಿಲೀಸ್ ಮಾಡಲಾಗುತ್ತದೆ.
ಅಂತೆಯೇ ಈ ಬಾರಿ ಸಿನಿಮಾ ತಾರೆಯರ ಲಿಸ್ಟ್ ರಿಲೀಸ್ ಆಗಿದ್ದು, ದೊಡ್ಡ ದೊಡ್ಡ ಸ್ಟಾರ್ ಗಳನ್ನ ಹಿಂದಿಟ್ಟಿರುವ ಕೊಡಗಿನ ಕುವರಿ ರಶ್ಮಿಕಾ ಅಗ್ರಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ಕವರ್ ಪೇಜ್ ನಲ್ಲಿ ನಯನತಾರಾ ಹಾಗೂ ದುಲ್ಕರ್ ಸಲ್ಮಾನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಮಿಂಚಿದ್ದರು. ದಕ್ಷಿಣ ಭಾರತದ ಕೆಲವೇ ಕೆಲವು ಮಂದಿಯಲ್ಲಿ ವಿಶೇಷವಾಗಿ ಕನ್ನಡದಿಂದ ಯಶ್ ಮೊದಲ ಬಾರಿಗೆ ಇಂತಹ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ನಟ – ನಟಿಯರ ಪಟ್ಟಿಯಯನ್ನ ಪೋರ್ಬ್ಸ್ ರಿಲೀಸ್ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಯಾವ ಸೌತ್ ಫಿಲಂ ಇಂಡಸ್ಟ್ರಿಯ ನಟ – ನಟಿಯರು ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ, ಹೆಚ್ಚು ಸಕ್ರಿಯರಾಗಿದ್ದು, ಯಾರ ಪೋಸ್ಟ್ ಗಳಿಗೆ ಪ್ರತಿಕ್ರಿಯೆಗಳು ಹೆಚ್ಚಿಗೆ ಬರುತ್ತದೆ ಎಂಬ ಅಂಶ ಸೇರಿದಂತೆ ಇನ್ನೂ ಹಲವಾರು ವಿಚಾರಗಳನ್ನ ಬೇಸ್ ಆಗಿ ಇಟ್ಟುಕೊಂಡು ತಯಾರಿಸಲಾಗಿರುವ ಪಟ್ಟಿ ಇದಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಇದ್ರೆ , 2ನೇ ಸ್ಥಾನದಲ್ಲಿ ವಿಜಯ್ ದೇವರಕೊಂಡ ಇದ್ದಾರೆ. 3ನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ.
ಹೌದು ರಶ್ಮಿಕಾ ಮಂದಣ್ಣ 9. 88 ಪಾಯಿಂಟ್ ಗಳನ್ನ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ. ರಶ್ಮಿಕಾ ಜೊತೆಗೆ ಆಗಾಗ ರೂಮರ್ ಗಳಿಂದ ಸುದ್ದಿಯಾಗುತ್ತಲೇ ಇರುವ ನಟ ವಿಜಯ್ ದೇವರಕೊಂಡ 9.67 ಪಾಯಿಂಟ್ ಗಳ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ನಮ್ಮ ಕನ್ನಡದ ನಟ ಯಶ್ 9.54 ಪಾಯಿಂಟ್ ಗಳನ್ನ ಪಡೆದು 3ನೇ ಸ್ಥಾನದಲ್ಲಿದ್ದಾರೆ. ನಂತರ ಸಮಂತಾ, ಅಲ್ಲು ಅರ್ಜುನ್, ದುಲ್ಕರ್ ಸಲ್ಮಾನ್, ಪೂಜಾ ಹೆಗ್ಡೆ, ಪ್ರಭಾಸ್, ಸೂರ್ಯ, ತಮನ್ನಾ ಭಾಟಿಯಾ, ರಾಮ್ ಚರಣ್, NTR, ವರುಣ್ ತೇಜ್, ಅಖಿಲ್, ಅಕ್ಕಿನೇನಿ, ಸಾಯಿ ಧರಮ್ ತೇಜ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.