ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ Tirupati Thimappa saaksha tv
ಆಂಧ್ರಪ್ರದೇಶ : ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ಗುಡ್ ನ್ಯೂಸ್ ನೀಡಿದೆ.
ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‍ಲೈನ್ ಮೂಲಕ ಕಾಯ್ದಿರಿಸುವ 300 ರೂಪಾಯಿಯ ಟಿಕೆಟ್ ಕೋಟಾವನ್ನು ಟಿಟಿಡಿ ಇಂದು ಬಿಡುಗಡೆಗೊಳಿಸಿದೆ.
ಆನ್ ಲೈನ್ ಟಿಕೆಟ್ ಗಳನ್ನು ವರ್ಚುಯಲ್ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದು, ಸದ್ಯ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಆನ್‍ಲೈನ್ ಟಿಕೆಟ್‍ಗಳ ಬುಕ್ಕಿಂಗ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಆನ್‍ಲೈನ್ ಮೂಲಕ ಟಿಕೆಟ್‍ಗಳನ್ನು ಬಿಡುಗಡೆ ಮಾಡಲಾಗಿದೆ. ದಿನಂಪ್ರತಿ 12 ಸಾವಿರ ಟೋಕನ್‍ಗಳು ಲಭ್ಯ ಇರಲಿವೆ.