ಇಂಡೋ-ಪಾಕ್ ಪಂದ್ಯ | ಭಾರತಕ್ಕೆ ಕಾಡುತ್ತಿದೆ ಆ ಚಿಂತೆ
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿಯನ್ನು ಬಿಡುವುದಕ್ಕೆ ಮೊದಲು ವಿಶ್ವ ವಿಜೇತನಾಗಬೇಕು ಅನ್ನುವ ಕನಸು ಕಾಣುತ್ತಿದ್ದಾರೆ.
ಅದಕ್ಕಾಗಿ ಟೀಮ್ ಇಂಡಿಯಾ ಸಖತ್ ತಯಾರಿ ಮಾಡಿಕೊಳ್ಳುತ್ತಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಟೀಮ್ ಇಂಡಿಯಾ ಕಡು ಬದ್ಧ ವೈರಿ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಪಾಕ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕೆಲವೊಂದು ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದೆ.
ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಓಪನ್ ಮಾಡುವವರು ಯಾರು ಅನ್ನುವ ಬಗ್ಗೆ ಚರ್ಚೆ ಎದ್ದಿದೆ. ಇಶನ್ ಕಿಶಾನ್, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಆಯ್ಕೆಗಳು ಟೀಮ್ ಇಂಡಿಯಾದ ಮುಂದಿದೆ.
ಇಶನ್ ಕಿಶನ್ ಆಡಿದರೆ ಲೆಫ್ಟ್, ರೈಟ್ ಕಾಂಬಿನೇಷನ್ ಸಿಗಲಿದೆ. ಆಗ ರಾಹುಲ್ ಫಿನಿಷರ್ ಕಾರ್ಯ ಮಾಡಬೇಕಾಗುತ್ತದೆ.
ವಿರಾಟ್ ಒನ್ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇಶನ್ ಕಿಶನ್ ಆಡದೇ ಇದ್ದರೆ ಟೀಮ್ ಇಂಡಿಯಾದಲ್ಲಿ ರಿಷಭ್ ಪಂತ್ ರವೀಂದ್ರ ಜಡೇಜಾ ಮಾತ್ರ ಎಡಗೈ ಬ್ಯಾಟ್ಸ್ಮನ್ ಆಗಿ ಆಡುತ್ತಾರೆ.
4ನೇ ಕ್ರಮಾಂಕದಲ್ಲಿ ಆಡುವ ಆಟಗಾರನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಿಷಭ್ ಪಂತ್ ಅಥವಾ ಸೂರ್ಯ ಕುಮಾರ್ ಯಾದವ್ ರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಅನ್ನುವ ಚರ್ಚೆ ಇದೆ.
ಪಂತ್ ಫಿನಿಷರ್ ಆದರೆ ಒಳ್ಳೆಯದು ಅನ್ನುವುದು ಎಕ್ಸ್ ಪರ್ಟ್ ಒಪಿನಿಯನ್. ಸೂರ್ಯ ಕುಮಾರ್ ಇನ್ನಿಂಗ್ಸ್ ಪೂರ್ತಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯಾರನ್ನು ಆಡಿಸಬೇಕೋ ಬೇಡ್ವೋ ಅನ್ನೋ ಚರ್ಚೆ ನಡೆಯುತ್ತಿದೆ. ಪಾಂಡ್ಯಾ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ರವೀಂದ್ರ ಜಡೇಜಾ ಒಬ್ಬರನ್ನೇ ಆಲ್ರೌಂಡರ್ ಆಗಿ ಆಡಿಸಬೇಕು, ಇನ್ನೊಬ್ಬ ಎಕ್ಸ್ ಟ್ರಾ ಬೌಲರ್ಗೆ ಸ್ಥಾ ನ ನೀಡಿ ಆ ಸ್ಥಾನವನ್ನು ಗಟ್ಟಿಮಾಡಬೇಕು ಅನ್ನುವ ಚರ್ಚೆ ನಡೆಯುತ್ತಿದೆ.
ಒಂದು ವೇಳೆ ಪಾಂಡ್ಯಾ ಬೌಲಿಂಗ್ ಮಾಡಲು ಒಪ್ಪಿಕೊಂಡರೆ ಜಡೇಜಾ ಮತ್ತು ಪಾಂಡ್ಯಾ ಇಬ್ಬರೂ ಆಲ್ರೌಂಡರ್ ಸ್ಥಾನದಲ್ಲಿ ಆಡುತ್ತಾರೆ.
ಸ್ಪಿನ್ನರ್ ಗಳ ವಿಚಾರಕ್ಕೆ ಬಂದರೆ ಇಲ್ಲೂ ಕನ್ಫ್ಯೂಷನ್. ವರುಣ್ ಚಕ್ರವರ್ತಿ ಸ್ಥಾನ ಫಿಕ್ಸ್ ಆದಂತಿದೆ. ಆಲ್ರೌಂಡರ್ ಜಡೇಜಾ ಮತ್ತೊಬ್ಬ ಸ್ಪಿನ್ನರ್.
ಆದರೆ ಅಶ್ವಿನ್ ಮತ್ತು ರಾಹುಲ್ ಚಹರ್ ಆಯ್ಕೆ ಬಗ್ಗೆ ಗೊಂದಲವಿದೆ. ಅಶ್ವಿನ್ ಆಯ್ಕೆಯಿಂದ ಹೊಸ ಬಾಲ್ ನಲ್ಲೇ ಸ್ಪಿನ್ ದಾಳಿ ಆರಂಭಿಸಬಹುದು.
ಫಾಸ್ಟ್ ಬೌಲಿಂಗ್ ವಿಚಾರಕ್ಕೆ ಬಂದರೆ ಬುಮ್ರಾ ಮೊದಲ ಆಯ್ಕೆ. ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಮಧ್ಯೆ ಯಾರು ಆಡ್ತಾರೆ ಅನ್ನುವ ಗೊಂದಲವಿದೆ. ಮತ್ತೊಂದು ಕಡೆ ಶಾರ್ದೂಲ್ ಠಾಕೂರ್ ಕೂಡ ಪೈಪೋಟಿಗೆ ಬಿದ್ದಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಹಲವು ಆಯ್ಕೆಗಳಿವೆ. ಹೀಗಾಗಿ ಸಹಜವಾಗಿಯೇ ಕಾಂಬಿನೇಷನ್ ಬಗ್ಗೆ ಗೊಂದಲವಿದೆ.