ಅಭಿಮಾನಿಗಳ ಡಾರ್ಲಿಂಗ್… ಬಾಹುಬಲಿ ಪ್ರಭಾಸ್ ಗೆ ಹುಟ್ಟುಹಬ್ಬದ ಸಂಭ್ರಮ
ಪ್ಯಾನ್ ಇಂಡಿಯಾ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟಾಲಿವುಡ್ ನ ಡಾರ್ಲಿಂಗ್ ಪ್ರಭಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು , ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾ ತೆಗೆದ ಬಳಿಕ ಅವರ ಸಾಹೋ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಕಾಣಲಿಲ್ಲ. ಇದಾದ ನಂತರ ಪ್ರಭಾಸ್ ಸಾಲು ಸಾಲು ಬಿಗ್ ಬಜೆಟ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮುಖವಾಗಿ ಸುಮಾರು 500 ಕೋಟಿ ಬಜೆಟ್ ನಲ್ಲಿ ಮೂಡಿಬರುತ್ತಿರುವ ರಾಧೆಶ್ಯಾಮ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ.
ಈ ಸಿನಿಮಾದಲ್ಲಿ ಮಾಸ್ ಅಭಿಮಾನಿಗಳ ಡಾರ್ಲಿಂಗ್ ಪ್ರಭಾಸ್ ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಳ್ತಿರೋದು ವಿಶೇಷವಾಗಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ನಲ್ಲಿ ಪ್ರಭಾಸ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದರ ಜೊತೆಗೆ ಆದಿಪುರುಷ್ ಸೇರಿ ಇನ್ನೂ ಅನೇಕ ಪ್ರಾಜೆಕ್ಟ್ ಗಳು ಪ್ರಭಾಸ್ ಅವರ ಕೈಲಿದೆ.
ಇಂದು ಪ್ರಬಾಸ್ ಅವರ ಬರ್ತ್ ಡೇ ಪ್ರಯುಕ್ತ ರಾಧೆಶ್ಯಾಮ್ ಸಿನಿಮಾತಂಡವು ಅಭಿಮಾನಿಗಳ ಖುಷಿ ಹೆಚ್ಚಿಸಲು ಪ್ರಭಾಸ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ ಎದೆ ಬಡಿತ ಹೆಚ್ಚಿಸುವಂತಿದೆ. ಪ್ರಭಾಸ್ ಕ್ಯಾರೆಕ್ಟರ್ ಕುತೂಹಲ ಹೆಚ್ಚಿಸುತ್ತಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ವೀವ್ಸ್ ಲಕ್ಷ ದಾಟಿದೆ. ಲೈಕ್ಸ್ 100ಸಾವವಿರ ದಾಟಿದೆ. ಸಾವಿರಾರು ಕಮೆಂಟ್ ಗಳು ಬಂದಿವೆ.
ಇನ್ನೂ ಮಧ್ಯಾಹ್ನದ ವೇಳೆಗೆ ಪ್ರಭಾಸ್ ನಟನೆಯ ಆದಿಪುರುಷ್ ಪೋಸ್ಟರ್ ಕೂಡ ರಿಲೀಸ್ ಆಗಲಿದೆ. ಒಟ್ಟಾರೆ ಅಭಿಮಾನಿಗಳ ಡಾರ್ಲಿಂಗ್ ಪ್ರಭಾಸ್ ಅವರ ಬರ್ತ್ ಡೇಯನ್ನ ಫ್ಯಾನ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಜಾತ್ರೆಯಂತೆ ಸೆಲೆಬ್ರೇಟ್ ಮಾಡ್ತಿದ್ದು, ಈ ಟೀಸರ್ ಪೋಸ್ಟರ್ ಗಳು ಅವರ ಖುಷಿಯನ್ನ ದುಪ್ಪಟ್ಟಾಗಿಸಿವೆ.
“ಐಮ್ ನೋ ಗಾಡ್.. ಬಟ್ ಐಮ್ ನಾಟ್ ಒನ್ ಆಫ್ ಯೂ” : ಕುತೂಹಲ ಹೆಚ್ಚಿಸಿದ ಪ್ರಭಾಸ್ ರಾಧೆಶ್ಯಾಮ್ ಟೀಸರ್..!