ಟಿ – 20 ವಿಶ್ವಕಪ್ – ಮತ್ತೆ ಕಾಣಿಸಿಕೊಂಡ ಬಶೀರ್ ಚಾಚ ಮತ್ತು ಸುಧೀರ್
ಕ್ರಿಕೆಟ್ ಜಗತ್ತು ಕಾತರದಿಂದ ಎದರು ನೋಡುತ್ತಿರು ಭಾರತ ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಕ್ರಿಕೇಟ್ ನ ಮಹಾ ಅಭಿಮಾನಿಗಳು ಎಂದು ಗುರುತಿಸಿಕೊಂಡಿರುವ ಬಶೀರ್ ಚಾಚ ಮತ್ತು ಸುಧಿರ್ ಅವರು ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಬಶೀರ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಜೊತೆಗೆ ಭಾರತದ ಮಾಜಿ ನಾಯಕ ಎಂ ಎಸ್ ಧೋನಿಯವರ ಅತಿದೊಡ್ಡ ಅಭಿಮಾನಿ. ಬಶೀರ್ ಚಾಚ ಎಷ್ಟರ ಮಟ್ಟಿಗೆ ದೋನಿಯನ್ನ ಅನುಕರಿಸುತ್ತಾರೆ ? ಎಂದರೆ ಧೋನಿ ರಿಟೈರ್ಮೆಂಟ್ ಘೋಷಿಸಿದಾಗಿನಿಂದ ಅವರು ಭಾರತ ಪಾಕಿಸ್ತಾನ ಪಂದ್ಯ ನೋಡುವುದನ್ನೆ ಬಿಟ್ಟಿದ್ದರು.ಈಗ ಭಾರತ ತಂಡದ ಮೆಂಟರ್ ಆಗಿ ದೋನಿ ವಾಪಸ್ ಆಗಿರುವ ಕಾರಣ ಬಶೀರ್ ಚಾಚ ಮತ್ತೆ ಅವರನ್ನ ನೋಡಲು ದುಬೈಗೆ ಕಾಲಿಟ್ಟಿದ್ದಾರೆ
ಅವರಿಗೆ ಇನ್ನೂ ಪಂದ್ಯದ ಟಿಕೆಟ್ ಸಿಕ್ಕಿಲ್ಲವಾದರೂ ಧೋನಿ ಖಚಿತವಾಗಿಯೂ ಕೊಡಿಸುತ್ತಾರೆ ಎಂಬ ವಿಶ್ವಾಸದಿಂದ ಇದ್ದಾರೆ.. “ಈ ಭಾರಿ ಪಾಕಿಸ್ತಾನ ಗೆಲ್ಲಲಿ ಎಂದು ನಾನು ಮನಃ ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ..ಆದರೆ ಧೋನಿ ನನ್ನ ಫೇವರೇಟ್. ಈ ಬಾರಿಯಾದರೂ ಪಾಕಿಸ್ತಾನಿಗರು ಖುಷಿಪಡುವ ಸಮಯ ಬರಲಿ” ಎಂದು ಬಶೀರ್ ಚಾಚ ಹೇಳಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರನ್ನ ಆರಾಧ್ಯ ದೈವ ಎಂದು ಆರಾಧಿಸುವ ಭಾರತದ ಮತ್ತೊಬ್ಬ ಕ್ರಿಕೆಟ್ ಅಭಿಮಾನಿ ಸುಧೀರ್ ಸಹ ದುಬೈನಲ್ಲಿ ಬೀಡುಬಿಟ್ಟಿದ್ದು ಭಾರತ ಪಾಕ್ ಮುಖಾಮುಖಿಯನ್ನ ಎದುರುನೋಡುತ್ತಿದ್ದಾರೆ.








