ದೇಶವಾಸಿಗಳ ಮೇಲೆ ಬಿಜೆಪಿ `ಪ್ರೈಸ್ ಹೈಕ್ ಸರ್ಜಿಕಲ್ ಸ್ಟ್ರೈಕ್’ BJP saaksha tv
ಬೆಂಗಳೂರು : ದೇಶದಲ್ಲಿ ಪ್ರತಿದಿನ ಬೆಲೆ ಏರಿಕೆಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಈ ಬೆಲೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
‘ಪ್ರೈಸ್ ಹೈಕ್’ ದೇಶವಾಸಿಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಿನನಿತ್ಯದ ‘ಸರ್ಜಿಕಲ್ ಸ್ಟ್ರೈಕ್’! ಪೆಟ್ರೋಲ್, ಡೀಸೆಲ್ ಬೆಲೆ ಯಶಸ್ವಿಯಾಗಿ ಶತಕ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿದೆ. 14 ವರ್ಷಗಳಲ್ಲಿ ಮೊದಲ ಬಾರಿ ಬೆಂಕಿಪೊಟ್ಟಣಗಳ ಬೆಲೆ ದ್ವಿಗುಣಗೊಂಡಿದೆ. ಅಡುಗೆ ಅನಿಲದ ಬೆಲೆ 1000 ಗಡಿಯಲ್ಲಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.
ಐದನೇ ದಿನವೂ ತೈಲ ಬೆಲೆ ಏರಿಕೆ
ಸತತ ಐದನೇ ದಿನವೂ ಇಂಧನ ಬೆಲೆ ಏರಿಕೆಯಾದಂತೆ ಆಗಿದೆ. ಇವತ್ತು ತೈಲ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 35 ಪೈಸೆ ಹೆಚ್ಚಿಸಿದೆ. ಇದರೊಂದಿಗೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.59 ರೂಪಾಯಿ ಹಾಗೂ ಡೀಸೆಲ್ ದರ 96.32 ರೂಪಾಯಿ ಇದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 113.46 ಕ್ಕೆ ಹಾಗೂ ಲೀಟರ್ ಡೀಸೆಲ್ 104.38 ರೂ. ಗೆ ಮಾರಾಟವಾಗುತ್ತಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.34 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.23 ರೂ. ಗೆ ಏರಿಕೆಯಾಗಿದೆ.









