ಎಲ್ಲಿ ಹೋಗುತ್ತೆ ಹಳೆ ಚಾಳಿ…? ಕೆಟ್ಟ ಮೇಲೆ ಬುದ್ದಿ ಕಲಿತ ವಕಾರ್ ಯೂನಸ್ ಕ್ಷಮೆಯಾಚನೆ..!
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ವೇಗದ ಬೌಲರ್ ವಕಾರ್ ಯೂನಸ್ ಗೆ ಕೊನೆಗೂ ತನ್ನ ತಪ್ಪಿನ ಅರಿವಾಗಿದೆ. ಟಿ-ಟ್ವೆಂಟಿ ವಿಶ್ವಕಪ್ ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ವಕಾರ್ ಯೂನಸ್ ಪಂದ್ಯದ ವಿಶ್ಲೇಷಣೆ ಮಾಡುತ್ತಿರುವಾಗ ಖಾಸಗಿ ಚಾನೆಲ್ ನಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
29 ವರ್ಷಗಳ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಪಾಕಿಸ್ತಾನ ಭಾರತ ತಂಡವನ್ನು ಸೋಲಿಸಿತ್ತು. ಅದು ಕೂಡ ಹತ್ತು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಗೆಲುವು ಸಾಧಿಸಿದಾಗ ವಕಾರ್ ಯೂನಸ್ ವಿವಾದ್ಮಾತಕ ಹೇಳಿಕೆಯನ್ನು ನೀಡಿದ್ದರು.
ಪಾಕ್ ಕ್ರಿಕೆಟ್ ತಂಡದ ಆರಂಭಿಕ ರಿಜ್ವಾನ್ ಅವರು ವಿರಾಮದ ವೇಳೆ ನಮಾಜ್ ಮಾಡಿದ್ದರು. ಇದಕ್ಕೆ ಯೂನಸ್ ಅವರು ಹಿಂದೂಗಳ ಎದುರು ನಮಾಜ್ ಮಾಡಿರುವುದು ತುಂಬಾ ಸಂತಸವನ್ನು ನೀಡಿತ್ತು ಎಂದು ಹೇಳಿದ್ದರು.
ವಕಾರ್ ಯೂನಸ್ ಅವರ ಈ ಹೇಳಿಕೆಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಕಾರ್ ಯೂನಸ್ ಅವರ ಹೇಳಿಕೆಯನ್ನು ಭಾರತದ ಮಾಜಿ ಆರಂಭಿಕ ವಾಸೀಮ್ ಜಾಫರ್ ಕೂಡ ಖಂಡಿಸಿದ್ದರು.
ಸಾಮಾಜಿಕ ಜಾಲ ತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಕಾರ್ ಯೂನಸ್ ಈಗ ಕ್ಷಮೆಯಾಚಿಸಿದ್ದಾರೆ. ನಾನು ಆ ಕ್ಷಣದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಟ್ವಿಟರ್ ನಲ್ಲಿ ವಕಾರ್ ಯೂನಸ್ ಕ್ಷಮೆ ಯಾಚಿಸಿದ್ದಾರೆ.
T-20 ವಿಶ್ವಕಪ್ ಇಂದು ಇಂಗ್ಲೆಂಡ್ vs ಬಾಂಗ್ಲಾ ಹಣಾಹಣಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಯುದ್ಧದಂತೆ ಬಿಂಬಿಸಲಾಗುತ್ತಿದೆ. ಆದ್ರೆ ಕ್ರಿಕೆಟಿಗರು ವೃತ್ತಿಪರತೆಯಿಂದ ಆಡುತ್ತಿದ್ದಾರೆ. ಹಾಲಿ ಪಾಕಿಸ್ತಾನ ತಂಡ ಭಾರತದ ಆಟಗಾರರ ಜೊತೆ ಸೌರ್ಹಾದತೆಯಿಂದಲೇ ಆಡಿದ್ದಾರೆ. ಪಂದ್ಯದ ಬಳಿಕ ಟೀಮ್ ಇಂಡಿಯಾದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಅವರಿಂದ ಟಿಪ್ಸ್ ಕೂಡ ಪಡೆದುಕೊಂಡಿದ್ದಾರೆ. ಕ್ರೀಡೆಯಿಂದ ಸೌಹಾರ್ದತೆ ಬೆಳೆಯುತ್ತದೆ. ಅದನ್ನು ಬಿಟ್ಟು ವಕಾರ್ ಯೂನಸ್ ಈ ರೀತಿಯ ಹೇಳಿಕೆ ನೀಡಿ ಮತ್ತೆ ಎರಡು ತಂಡಗಳ ನಡುವೆ ದ್ವೇಷವನ್ನು ಬಿತ್ತುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಅಭಿಮಾನಿಗಳದ್ದು. ಏನೇ ಆಗ್ಲಿ ವಕಾರ್ ಯೂನಸ್ ಗೆ ಕೊನೆಗೂ ಕೆಟ್ಟ ಮೇಲೆ ಬುದ್ದಿ ಬಂದು ಈಗ ಕ್ಷಮೆ ಕೋರಿದ್ದಾರೆ.