ಮರೆಯಲಾಗದಂತಹ ಧಾರವಾಹಿಗಳನ್ನ ಮಾಡಿರುವ ಜನಪ್ರಿಯ ನಟ ಹಾಗೂ ಧಾರಾವಾಹಿ ನಿರ್ದೇಶಕರಾದ ಟಿ ಎನ್ ಸೀತಾರಾಮ್ ಅವರು ಇದೀಗ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೌದು ಇದೇ ಮೊದಲ ಬಾರಿಗೆ ವೆಬ್ ಸರಣಿಗೆ ಆಕ್ಷನ್ ಕಟ್ ಹೇಳ್ತಾಯಿದ್ದಾರೆ ಸೀತಾರಾಮ್ ಅವರು.
ಹೌದು ಹೊಸ ಪ್ರಯತ್ನದಲ್ಲಿ ಮರ್ಡರ್ ಮಿಸ್ಟರಿ ಕಥೆ ಆಯ್ಕೆ ಮಾಡಿಕೊಂಡಿರುವ ಸೀತಾರಾಮ್ ಅವರು ಅದನ್ನ ವೆಬ್ ಸರಣಿಯ ರೂಪಾದಲ್ಲಿ ಯಾವ ರೀತಿ ತೋರಿಸಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಇದೆ.
ಅಂದ್ಹಾಗೆ ಲಾಕ್ ಡೌನ್ ನಂತರದಲ್ಲಿ ವೆಬ್ ಸರಣಿ ಕಡೆಗೆ ಮೇಕರ್ಸ್ ನಿರ್ದೇಶಕರ ಒಲವು ಹೆಚ್ಚಾಗಿದೆ. ಅಲ್ಲದೇ ಜನ ಕೂಡ ವೆಬ್ ಸರಣಿಗಳನ್ನ ಹೆಚ್ಚಾಗಿ ವೀಕ್ಷಣೆ ಮಾಡ್ತಿದ್ದಾರೆ. ಟಿ.ಎನ್.ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ‘ಮಾಯಾ ಮರ್ಡರ್ ಕೇಸ್’ ಹೆಸರಿನ ಸರಣಿ ಪ್ರಸಾರವಾಗಲಿದೆ. ಬೆಂಗಳೂರಿನ ರುದ್ರಾಕ್ಷಿಪುರದ ಗಲ್ಲಿಯೊಂದರ ಮನೆಯೊಂದರಲ್ಲಿ ಒಂದು ಮಧ್ಯರಾತ್ರಿ ಒಬ್ಬರು ಗುಂಡೇಟಿಗೆ ಬಲಿಯಾಗುವುದೇ ಈ ಕೊಲೆಯ ಕತೆಯ ಸ್ಟೋರಿಯಾಗಿದೆ. ಇದೊಂದು ಕೋರ್ಟ್ ರೂಮ್ ಡ್ರಾಮಾ ಆಗಿರಲಿದೆ ಎಂದು ಟಿ.ಎನ್.ಸೀತಾರಾಮ್ ಹೇಳಿದ್ದಾರೆ.
ಭೂಮಿಕಾ ಕ್ರಿಯೇಶನ್ಸ್ ಕಡೆಯಿಂದ ನಿರ್ಮಾಣ ಮಾಡಲಾಗುತ್ತಿರುವ ಈ ವೆಬ್ ಸರಣಿ ಭೂಮಿಕಾ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತ್ರವೇ ಲಭ್ಯವಿರಲಿದೆ.