ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಗುದ್ದಾಟ ನಡೆಯುತ್ತಲೇ ಇರುತ್ತದೆ. ಇದೀಗ ಟ್ವೀಟ್ ವಿಚಾರವಾಗಿ ಇಬ್ಬರ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆದಿದೆ.
ಹೌದು..! ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹಮ್ಮದ್ ಅವರಿಗೆ ಕಿಚ್ಚ ಶ್ರದ್ಧಾಂಜಲಿ ಅರ್ಪಿಸಿ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ನಲ್ಲಿ ಕಿಚ್ಚ ಕನ್ನಡದಲ್ಲಿ ಬರೆಯುವಾಗ ಕೆಲವೊಂದು ತಪ್ಪು ಮಾಡಿದ್ದರು. ಇದನ್ನು ದರ್ಶನ್ ಅಭಿಮಾನಿಗಳು ಗಮನಿಸಿ ಟ್ರೋಲ್ ಮಾಡಿದ್ದರು. ತಕ್ಷಣವೇ ಟ್ವೀಟ್ ಡಿಲೀಟ್ ಮಾಡಿದ್ದ ಕಿಚ್ಚ ಹೊಸದಾಗಿ ಕನ್ನಡದಲ್ಲಿ ಸಂದೇಶ ಬರೆದಿದ್ದರು. ಇದಕ್ಕೆ ಮತ್ತಷ್ಟು ಕಿಚ್ಚನ ಕಾಲೆಳೆದಿರುವ ದರ್ಶನ್ ಅಭಿಮಾನಿಗಳು ಮೊದಲು ಕನ್ನಡ ಸರಿಯಾಗಿ ಬರೆಯಲು ಕಲಿಯಿರಿ ಎಂದು ತಮಾಷೆ ಮಾಡಿದ್ದಾರೆ.
ಕಿಚ್ಚನ ಅಭಿಮಾನಿಗಳಿಂದ ಟಾಂಗ್!
ಇದಕ್ಕೆ ತಿರುಗೇಟು ಕೊಟ್ಟಿರುವ ಕಿಚ್ಚನ ಅಭಿಮಾನಿಗಳು ದರ್ಶನ್ ಹಿಂದೊಮ್ಮೆ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡುವಾಗ ಮಾಡಿದ್ದ ವ್ಯಾಕರಣ ತಪ್ಪನ್ನು ಎತ್ತಿ ತೋರಿಸಿ ನಿಮ್ಮ ಬಾಸ್ ಗೆ ಸರಿಯಾಗಿರಲು ಹೇಳಿ ಎಂದಿದ್ದಾರೆ. ಈ ರೀತಿ ಕಿಚ್ಚ ಮಾಡಿದ ಒಂದು ಟ್ವೀಟ್ ಅಭಿಮಾನಿಗಳಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.








