ಗೂಗಲ್ ಪೇ ಮಾದರಿಯಂತೆ ವಾಟ್ಸಾಪ್ ನಲ್ಲಿ ರೂ.255 ವರೆಗೂ ಕ್ಯಾಶ್ ಬ್ಯಾಕ್
ಜನಪ್ರಿಯ ಸಾಮಾಜಿಕ ಮೆಸೆಂಜರ್ ಆಪ್ ವಾಟ್ಸಾಪ್ ಯುಪಿಐ ವ್ಯವಹಾರವನ್ನು ಆರಂಭಿಸಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಕಳೆದ ವರ್ಷ ನವೆಂಬರ್‍ನಲ್ಲಿ ವಾಟ್ಸಾಪ್ ಪೆಮೆಂಟ್ಸ್ ಸೌಲಭ್ಯ ಆರಂಭವಾಯಿತು. ಇದೀಗ ಎಲ್ಲರೂ ವಾಟ್ಸಾಪ್ ಪೆಮೆಂಟ್ಸ್ ಮಾಡಬಹುದಾಗಿದೆ.
ಈ ಕ್ರಮದಲ್ಲಿ ವಾಟ್ಸಾಪ್ ಮೂಲಕ ಪೆಮೆಂಟ್ ಮಾಡುವವರರ ಸಂಖ್ಯೆಯನ್ನು ಹೆಚ್ಚಿಸಲು ಇದೀಗ ವಾಟ್ಸಾಪ್ ಗೂಗಲ್ ಪೇ ರೀತಿಯಲ್ಲಿ ಕ್ಯಾಶ್ ಬ್ಯಾಕ್ ಐಡಿಯಾದ ಮೊರೆ ಹೋಗಿದೆ.
ರೂ. 255 ವರೆಗೆ ಖಚಿತವಾದ ಕ್ಯಾಶ್‍ಬ್ಯಾಕ್..!
ವಾಟ್ಸಾಪ್ ಪೇಮೆಂಟ್ಸ್ ಬಳಸುತ್ತಿರುವ ಬಳಕೆದಾರರು ಯಾರಿಗಾದರೂ ರುಪಾಯಿ 1 ಕಳುಹಿಸಿದರೇ ಅವರಿಗೆ 21 ರೂಪಾಯಿ ಕ್ಯಾಶ್ ಬ್ಯಾಕ್ ಬರಲಿದೆ. ಈ ಕೊಡುಗೆಯು ಮೊದಲ ಐದು ವಹಿವಾಟುಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ವಾಟ್ಸಾಪ್ ಪೇಮೆಂಟ್ ಪ್ರಚಾರದ ಕೊಡುಗೆಯ ಭಾಗವಾಗಿ, ಬಳಕೆದಾರರು ಒಟ್ಟು 255 ರೂಪಾಯಿಗಳ ಕ್ಯಾಶ್ಬ್ಯಾಕ್ ಪಡೆಯಬಹುದು.
ವಾಟ್ಸಾಪ್ ಪೇಮೆಂಟ್ಸ್ ಸೆಟ್ಟಿಂಗ್ ಹೇಗೆ..?
* ವಾಟ್ಸಾಪ್ ಪೆಮೆಂಟ್ಸ್ ಮಾಡಲಿಚ್ಛಿಸುವವರು ಮೊದಲು ವಾಟ್ಸಾಪ್ ನ ಅಪ್ ಡೇಟ್ ವರ್ಶನ್ ಡೌನ್ ಲೋಡ್ ಮಾಡಿಕೊಂಡಿರಬೇಕು.
* ವಾಟ್ಸಾಪ್ ಚಾಟ್ ಆಯ್ಕೆಯಲ್ಲಿ ಕಂಡುಬರುವ ‘?’ ಚಿಹ್ನೆಯನ್ನು ಪ್ರೆಸ್ ಮಾಡಬೇಕು. ಒಂದು ವೇಳೆ ನೀವು ಈ ಮೊದಲೇ ರಿಜಿಸ್ಟರ್ ಮಾಡಿಕೊಂಡದ್ದರೇ ಪೇಮೆಂಟ್ ಆಪ್ಷನ್ ಕಾಣಿಸುತ್ತದೆ.
* ಒಂದು ವೇಳೆ ರಿಜಿಸ್ಟರ್ ಮಾಡಿಕೊಂಡಿಲ್ಲ ಅಂದರೇ ಇತರ ಪೇಮೆಂಟ್ ಅಪ್ಲಿಕೇಷನ್ ಗಳಂತೆ ಬ್ಯಾಂಕ್ ಅಕೌಂಟನ್ನು ವಾಟ್ಸಾಪ್ ಗೆ ಲಿಂಕ್ ಮಾಡಬೇಕು.
*ನೀವು ಬ್ಯಾಂಕ್ ನಲ್ಲಿ ಯಾವ ಮೊಬೈಲ್ ನಂಬರ್ ನೀಡಿದ್ದರೋ, ಅದೇ ನಂಬರ್ ನಲ್ಲಿಯೇ ವಾಟ್ಸಾಪ್ ಬಳಕೆ ಇರಬೇಕು.
* ಯುಪಿಎ ಪರಿಶೀಲನೆಗಾಗಿ ಬ್ಯಾಂಕ್ ನಿಂದ ಆಟೋ ಡಿಟೆಕ್ಟ್ ಎಸ್ ಎಂಎಸ್ ಬರುತ್ತದೆ.
* ವಾಟ್ಸಾಪ್ ಪೇ, ಯುಪಿಎ ಸೆಟಪ್ ಪೂರ್ಣಗೊಳಿಸಿದ ನಂತರ ನೀವು ವಾಟ್ಸಾಪ್ ಚಾಟ್ ವಿಂಡೋದಿಂದ ಪಾವತಿಗಳನ್ನು ಮಾಡಬಹುದು.









