ಬಿಜೆಪಿಯ ನಿರ್ಗಮನ ಗೋಡೆ ಬರಹದಷ್ಟೇ ಸ್ಪಷ್ಟ : ರಣದೀಪ್ ಸುರ್ಜೇವಾಲಾ Ranjeep Surjewala saaksha tv
ಬೆಂಗಳೂರು : ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹಾನಗಲ್ ಕ್ಷೇತ್ರದ ಮತದಾರರಿಗೆ ಅಭಿನಂದನೆಗಳನ್ನ ಸಲ್ಲಿಕೆ ಮಾಡಿದ್ದಾರೆ.
ಹಾಗೆ ಬಿಜೆಪಿಯ ನಿರ್ಗಮನ ಗೋಡೆ ಬರಹದಷ್ಟೇ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ನ ಅಭೂತಪೂರ್ವ ಗೆಲುವಿಗಾಗಿ ಹಾನಗಲ್ ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ ಅಭಿನಂದನೆಗಳು.
ಶ್ರೀನಿವಾಸ ಮಾನೆ ಅವರ ನಿರಂತರ ಜನಸೇವೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರ ಅಪಾರ ಪರಿಶ್ರಮ ಕರ್ನಾಟಕ ‘ಬದಲಾವಣೆ’ಗಾಗಿ ಹಂಬಲಿಸುತ್ತಿದೆ ಎಂದು ಸಾಬೀತುಪಡಿಸಿದೆ.
ಬಿಜೆಪಿಯ ನಿರ್ಗಮನ ಗೋಡೆ ಬರಹದಷ್ಟೇ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಶನಿವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಿತು. ಇದರ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಜಯ ಸಾಧಿಸಿದ್ದಾರೆ.
13ನೇ ಸುತ್ತು ಮುಕ್ತಾಯಕ್ಕೆ ಕಾಂಗ್ರೆಸ್ನ ಶ್ರೀನಿವಾಸ ಮಾನೆ 59,985 ಮತಗಳನ್ನು ಪಡೆದರೆ ಬಿಜೆಪಿಯ ಶಿವರಾಜ್ ಸಜ್ಜನರ 52,922 ಮತಗಳನ್ನು ಪಡೆದಿದ್ದಾರೆ. ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದೆ.
ಶ್ರೀನಿವಾಸ ಮಾನೆ 7063 ಮತಗಳ ಮುನ್ನಡೆಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ತೊಡಗಿದ್ದಾರೆ.
ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂದಾಗಿ ಹಾನಗಲ್ ನಲ್ಲಿ ಬೈ ಎಲೆಕ್ಷನ್ ನಡೆದಿತ್ತು.









