ದಕ್ಷಿಣ ಕನ್ನಡದ ವಿವಿಧೆಡೆ ಇಂದು ಗುಡುಗು ಸಿಡಿಲು ಗಾಳಿ ಸಹಿತ ಭಾರೀ ಮಳೆಯಾಗಿದೆ. ಇಂದಿನ ಭಾರೀ ಮಳೆಯ ಪರಿಣಾಮ ಪುತ್ತೂರು ಕಾಣಿಯೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆದ್ರಾಳದಿಂದ ಮುಕ್ವೆವರೆಗೆ ಸಾಲು ಸಾಲು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಲಾರಿಯೊಂದರ ಮೇಲೆ ಮರ ಬಿದ್ದು ರಸ್ತೆ ಬ್ಲಾಕ್ ಆಗಿದೆ.

ಭಾರೀ ಗಾಳಿ ಬೀಸಿದ ಪರಿಣಾಮ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ಪುತ್ತೂರು, ಕಡಬ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ಅತೂರು, ಉದನೆ, ಇಂಜಿರ ಸೇರಿದಂತೆ ಹಲವೆಡೆ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಜನರು ತೊಳಲಾಡುವಂತಾಗಿದೆ. ಇಂದಿನ ಗಾಳಿ ಮಳೆಯಿಂದ ಕೃಷಿಗೆ ಭಾರಿ ಹಾನಿಯಾಗಿದ್ದು, ಹಾನಿಯ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಮುಂದುವರಿದಿದೆ.








