ಮಹಾರಾಷ್ಟ್ರ ಡಿಸಿಎಂ ಗೆ ಸೇರಿದ 1000 ಕೋಟಿ ಮೌಲ್ಯದ ಆಸ್ತಿ ಜಪ್ತಿ.
ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸೇರಿರುವ ಮತ್ತು ಬೇನಾಮಿ ನಂಟು ಹೊಂದಿರುವ 1000 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಮುಂಬೈ ಮೂಲದ ಎರಡು ರಿಯಲ್ ಎಸ್ಟೇಟ್ ಗ್ರೂಪ್, ಮತ್ತು ಮುಂಬೈ, ಪುಣೆ, ಬಾರಾಮತಿಯಲ್ಲಿ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದೆ ಎಂದು ಹೇಳಲಾಗುವ ಸಂಸ್ಥೆಗಳ ಮೇಲೆ ನಡೆಸಿದ ರೈಡ್ ಸಮಯದಲ್ಲಿ ಇಲಾಖೆಯು ಸುಮಾರು 184 ಕೋಟಿ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಗೋವಾ ಮತ್ತು ಜೈಪುರದಲ್ಲಿ ದಾಳಿಯ ವೇಳೆ ಲೆಕ್ಕಕ್ಕೆ ಸಿಗದ ಆದಾಯವನ್ನು ಹೊಂದಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ. ಆಸ್ತಿ ಜಪ್ತಿಯ ಕುರಿತು ಇಲಾಖೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಬೈನಲ್ಲಿ ಕಚೇರಿ ಕಟ್ಟಡ, ದೆಹಲಿಯಲ್ಲಿ ಐಷಾರಾಮಿ ಫ್ಲಾಟ್, ಗೋವಾದ ರೆಸಾರ್ಟ್, ಕೃಷಿ ಭೂಮಿ ಮತ್ತು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.