ಅಧಿಕೃತವಾಗಿ ಕಾಂಗ್ರೇಸ್ ತೊರೆದ ಅಮರೀಂದರ್ ಸಿಂಗ್ – ಹೊಸ ಪಾರ್ಟಿ ಘೋಷಣೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ಈ ಮೂಲಕ ಅಧಿಕೃತವಾಗಿ ಕಾಂಗ್ರೇಸ್ ನಿಂದ ಹೊರನಡೆದಿದ್ದಾರೆ. ಪಂಜಾಬ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಇರುವಾಗ ಹೊಸ ಪಕ್ಷವನ್ನ ಘೋಷಿಸಿದ್ದಾರೆ. ಪಕ್ಷಕ್ಕೆ ‘ಪಂಜಾಬ್ ಲೋಕ ಕಾಂಗ್ರೆಸ್’ ಎಂದು ನಾಮಕರಣ ಮಾಡಿದ್ದಾರೆ.
7 ಪುಟಗಳ ರಾಜಿನಾಮೆ ಪತ್ರ ಬರೆದಿರುವ ಅಮರೀಂದರ್ “ಹೊಂದಾಣಿಕೆ ಮಾಡಿಕೊಳ್ಳುವ ಸಮಯ ಮುಗಿದಿದೆ ಮತ್ತು ಪಕ್ಷವನ್ನ ತೊರೆಯುವ ನನ್ನ ನಿರ್ಧಾರವೇ ಅಂತಿಮ” ಎಂದು ಸುದೀರ್ಘ ಪತ್ರವನ್ನ ಬರೆದಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಮ್ಮೊಂದಿಗೆ ಹಲವು ನಾಯಕರು ಇದ್ದಾರೆ. ಹೊಸ ಪಕ್ಷ ಘೋಷಣೆಯಾದ ನಂತರದಲ್ಲಿ ನಮ್ಮ ಬಳಿ ಯಾರೆಲ್ಲಾ ನಾಯಕರಿದ್ದಾರೆ ಎಂಬುದು ಸ್ಪಷ್ಟವಾಗಲಿದೆ,” ಎಂದು ಹೇಳಿದರು. ಪಂಜಾಬ್ ನ ಎಲ್ಲ 117 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸಲಿದ್ದೇವೆ ಎಂದು ತಿಳಿಸಿದರು.