ಮತ್ತೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿ 4 ಮಕ್ಕಳ ತಂದೆ ರೊನಾಲ್ಡೋ..!
ವಾಷಿಂಗ್ಟನ್ : ವಿಶ್ವದಾದ್ಯಂತ ಅನೇಕರ ಅಚ್ಚುಮೆಚ್ಚಿನ ಕ್ರೀಡಾಪಟುವಾಗಿರುವ ಫುಟ್ಬಾಲ್ ಆಟಗಾರ @cristiano ರೊನಾಲ್ಡೋ ಅವರು ಈಗಾಗಲೇ ವಿವಾಹಕ್ಕೂ ಮೊದಲೇ 4 ಮಕ್ಕಳ ತಂದೆಯಾಗಿದ್ದಾರೆ. ಇದೀಗ ಮತ್ತಿಮ್ಮೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಹೌದು ಈಗ ರೆನಾಲ್ಡೋ ಗರ್ಲಫ್ರೆಂಡ್ ಮತ್ತೆ ಗರ್ಭಿಣಿಯಾಗಿದ್ದು ಅವಳಿ ಮಕ್ಕಳ ನೀರಿಕ್ಷೆಯಲ್ಲಿದ್ದಾರೆ. ಗರ್ಲ್ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಜೊತೆಗಿನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಅವಳಿ ಮಗು ಪಡೆಯುವ ನೀರಿಕ್ಷೆಯಲ್ಲಿ ಇದ್ದೇವೆ ಎಂದು ರೊನಾಲ್ಡೋ ತಿಳಿಸಿದ್ದಾರೆ.
ಈ ಹಿಂದೆ ರೊನಾಲ್ಡೋ ತಮ್ಮ ಇತರೆ ಗೆಳತಿಯರೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಈಗ ಮತ್ತೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಖುಷಿ ಹಂಚಿಕೊಂಡಿರುವ ರೊನಾಲ್ಡೋ ತಮ್ಮ 4 ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನೂ ಕೂಡ ಶೇರ್ ಮಾಡಿದ್ದಾರೆ. ರೊನಾಲ್ಡೋ ಇರುವರೆಗೂ ಯಾರನ್ನೂ ಮದುವೆಯಾಗಿಲ್ಲ. ಬೇರೆ ಬೇರೆ ಗೆಳತಿಯರೊಂದಿಗೆ 4 ಮಕ್ಕಳ ತಂದೆಯಾಗಿದ್ದಾರೆ. ಈಗ ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಜಾರ್ಜಿನಾ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.
ರೋನಾಲ್ಡೋ ಮತ್ತು ಜಾರ್ನಿನಾ ಮೊದಲ ಬಾರಿಗೆ ಸ್ಪೇನ್ನಲ್ಲಿ ಭೇಟಿಯಾಗಿದ್ದರು. ಅವರು 2016ರಲ್ಲಿ ಭೇಟಿ ಪರಿಚಯಕ್ಕೆ ತಿರುಗಿ ಡೇಟಿಂಗ್ ಶುರು ಮಾಡಿದ್ದರು. ಇದೀಗ ಜಾರ್ಜಿನಾ ರೋನಾಲ್ಡೋ ಅವರ ಅವಳಿ ಮಕ್ಕಳಿಗೆ ತಾಯಿ ಆಗುವ ನೀರಿಕ್ಷೆಯಲ್ಲಿದ್ದಾರೆ. ರೊನಾಲ್ಡೋ ಅವರ ಎಲ್ಲಾ ಮಕ್ಕಳನ್ನ ಜಾರ್ಜಿನಾ ನೋಡಿಕೊಳ್ಳುತ್ತಿದ್ದಾರೆ. ಮೊದಲು ರೊನಾಲ್ಡೋ ಕಿಮ್ ಕರ್ದಿಶಿಯಾ, ಜಯೀನಾ, ಮಿರಾಲ್ ಗ್ರೀಸ್ಲೆಸ್, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜೊತೆ ಡೇಟಿಂಗ್ ಮಾಡಿದ್ದಾರೆ.