ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಾಲಿಚಾಂಪಿಯನ್ನರಿಗೆ ಹೀನಾಯ ಸೋಲುಣಿಸಿದ ಆಸ್ಟ್ರೇಲಿಯಾ, ಭರ್ಜರಿಯಾಗಿ ಗೆದ್ದು ನೆಟ್ ರನ್ರೇಟ್ ಹೆಚ್ಚಿಸಿಕೊಂಡ ಕಾಂಗರೂ ಟೀಮ್

Namratha Rao by Namratha Rao
November 7, 2021
in Newsbeat, Sports, ರಾಜ್ಯ
wi-vs-ind-19-years-west-indies-has-beaten-india saaksha tv
Share on FacebookShare on TwitterShare on WhatsappShare on Telegram

ಹಾಲಿಚಾಂಪಿಯನ್ನರಿಗೆ ಹೀನಾಯ ಸೋಲುಣಿಸಿದ ಆಸ್ಟ್ರೇಲಿಯಾ, ಭರ್ಜರಿಯಾಗಿ ಗೆದ್ದು ನೆಟ್ ರನ್ರೇಟ್ ಹೆಚ್ಚಿಸಿಕೊಂಡ ಕಾಂಗರೂ ಟೀಮ್

ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ಕಣಕ್ಕಿಳಿಯುವ ಮುನ್ನ ಎಲ್ಲವನ್ನೂ ಪ್ಲಾನ್ ಮಾಡಿಕೊಂಡಿತು. ಕೇವಲ ಗೆಲುವು ಮಾತ್ರವಲ್ಲ, ಭರ್ಜರಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿತ್ತು. ಅದನ್ನು ವೆಸ್ಟ್ಇಂಡೀಸ್ ವಿರುದ್ಧ ಅಪ್ಲೈ ಮಾಡಿ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಬೀಗಿತು. ಅಷ್ಟೇ ಅಲ್ಲ ನೆಟ್ ರನ್ರೇಟ್ನಲ್ಲಿ ದಕ್ಷಿಣ ಆಫ್ರಿಕಾಗಿಂತ ಮುಂದೆ ಸಾಗಿತು.

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಲೆಕ್ಕಾಚಾರದಲ್ಲೇ ಆಟ ಆರಂಭಿಸಿತು. ಆದರೆ ಕ್ರಿಸ್ಗೇಲ್ ಮತ್ತು ಎವಿನ್ ಲೆವಿಸ್ 2ನೇ ಓವರ್ನಲ್ಲೇ 19 ರನ್ ದೋಚಿ ಆಸೀಸ್ಗೆ ಶಾಕ್ ನೀಡಿದರು. ಆದರೆ 3ನೇ ಓವರ್ನಲ್ಲಿ ಎಲ್ಲವೂ ಉಲ್ಟಾ ಆಯಿತು. ಕ್ರಿಸ್ ಗೇಲ್ (19 ರನ್) ಕಮಿನ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ದಾಳಿಗಿಳಿದ ಹ್ಯಾಜಲ್ವುಡ್ ನಿಕೊಲಸ್ ಪೂರ್ (4 ರನ್) ಮತ್ತು ರೋಸ್ಟನ್ ಚೇಸ್ (0 ರನ್) ಒಂದೇ ಓವರ್ನಲ್ಲಿ ಔಟ್ ಮಾಡಿದರು. ಆ್ಯಡಂ ಜಂಪಾ 29 ರನ್ಗಳಿಸಿದ್ದ ಲೆವಿಸ್ ವಿಕೆಟ್ ಪಡೆದರು.

ಶಿಮ್ರನ್ ಹೆಟ್ಮಯರ್ (27 ರನ್) ಮತ್ತು ಕೈರಾನ್ ಪೊಲ್ಲಾರ್ಡ್ (44 ರನ್) ಇನ್ನಿಂಗ್ಸ್ ಬೆಳೆಸಿದರು. ಆದರೆ ಹ್ಯಾಜಲ್ ವುಡ್ ಹೆಟ್ಮಯರ್ ಮತ್ತು ಡ್ವೈನ್ ಬ್ರಾವೋ (10 ರನ್) ವಿಕೆಟ್ ಪಡೆದು ವಿಂಡೀಸ್ ಆಟಕ್ಕೆ ಅಡ್ಡಿಯಾದರು. ಸ್ಟಾರ್ಕ್ ಪೊಲ್ಲಾರ್ಡ್ ವಿಕೆಟ್ ಪಡೆದರು. ಕೊನೆಯಲ್ಲಿ ರಸೆಲ್ 18ರನ್ ಗಳಿಸಿದರೂ ವೆಸ್ಟ್ಇಂಡೀಸ್ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಮಾತ್ರಗಳಿಸಿತ್ತು. ಹ್ಯಾಜಲ್ವುಡ್ 4 ವಿಕೆಟ್ ಪಡೆದು ಮಿಂಚಿದರು.

ಅಬ್ಬರದ ಚೇಸಿಂಗ್ ಮಾಡಬೇಕು ಅಂತ ಆಸ್ಟ್ರೇಲಿಯಾ ಮೊದಲೇ ನಿರ್ಧಾರ ಮಾಡಿಕೊಂಡಿತ್ತು. ಹೀಗಾಗಿ ವಾರ್ನರ್ ಮತ್ತು ಫಿಂಚ್ ವೇಗವಾಗಿ ಆಟ ಆರಂಭಿಸಿದರು. ಫಿಂಚ್ 9 ರನ್ಗಳಿಸಿ ಔಟಾದರು. ಆದರೆ ವಾರ್ನರ್ ಜೊತೆ ಸೇರಿದ ಶಾನ್ ಮಾರ್ಷ್ ವಿಂಡೀಸ್ ಬೌಲರ್ಗಳನ್ನು ದಂಡಿಸಿದರು. ಬೌಂಡರಿ ಸಿಕ್ಸರ್ಗಳ ಸುರಿಮಳೆ ಆಯಿತು. ಆಸ್ಟ್ರೇಲಿಯಾ ಸಂಪೂರ್ಣ ಹಿಡಿತ ಸಾಧಿಸಿತು.

ವಾರ್ನರ್ ಕೇವಲ 56 ಎಸೆತಗಳಲ್ಲಿ 9 ಫೋರ್ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 89 ರನ್ಗಳಿಸಿ ಗೆಲುವಿನ ರೂವಾರಿ ಆದರು. ಮಾರ್ಷ್ 32 ಎಸೆತಗಳಲ್ಲಿ 5 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ 53 ರನ್ಗಳಿಸಿದರು. ಆಸ್ಟ್ರೇಲಿಯಾ 16.2 ಓವರುಗಳಲ್ಲಿ ಗುರಿ ತಲುಪಿ ಗೆಲುವಿನಿಂದ ಬೀಗಿತು. 22 ಎಸೆತಗಳು ಬಾಕಿ ಇರುವಂತೆ ಗೆದ್ದ ಆಸ್ಟ್ರೇಲಿಯಾ ನೆಟ್ ರನ್ರೇಟ್ ಅನ್ನು ಹೆಚ್ಚಿಸಿಕೊಂಡು ಸೆಮಿಫೈನಲ್ ತಲುಪಿತು.

Tags: #saakshatv#T20 World CupSouth AfricaSportswest indies
ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram